ಮಂಗಳೂರು : ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ KSRTC ಬಸ್ಸಿನಲ್ಲಿ ಅಪ್ರಾಪ್ತ ಹೆಣ್ಣು ಮಗುವಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದ್ದು ದುರುಳ ಉಸ್ತಾದ್ ಗೆ ಮಹಿಳೆಯರು ಗೂಸಾ ನೀಡಿ ತದಕಿದ್ದಾರೆ.
ಕೆಎಸ್ಆರ್ಟಿಸಿ ಬಸ್ನಲ್ಲಿ ಆರೋಪಿ ಉಸ್ತಾದ್ ಪ್ರಯಾಣ ಮಾಡುತ್ತಿದ್ದ. ಈ ವೇಳೆ ಅಪ್ರಾಪ್ತ ಬಾಲಕಿಯನ್ನು ಪಕ್ಕದಲ್ಲಿ ಕೂರಲು ಹೇಳಿದ್ದಾನೆ . ಮೈ ಕೈಗೆಲ್ಲ ಕೈ ಹಾಕಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲಾರಂಭಿದ್ದಾನೆ. ಇದನ್ನು ಪಕ್ದಲ್ಲಿದ್ದ ಸಹ ಪ್ರಯಾಣಿಕರು ಗಮನಿಸಿ ಬಾಲಕಿಯ ತಾಯಿಗೆ ಹೇಳಿದ್ದಾರೆ.
ಇದರಿಂದ ರೊಚ್ಚಿಗೆದ್ದ ಬಾಲಕಿಯ ತಾಯಿ ಹಾಗೂ ಸಾರ್ವಜನಿಕರು ಉಸ್ತಾದ್ ಗೆ ಸರಿಯಾಗಿ ಗೂಸಾ ಕೊಟ್ಟಿದ್ದಾರೆ. ತನ್ನನ್ನು ಬಿಟ್ಟು ಬಿಡುವಂತೆ ಪರಿಪರಿಯಾಗಿ ಬೇಡುತ್ತಿರುವ ದೃಶ್ಯ ಮತ್ತು ಆತನಿಗೆ ಗೂಸಾ ಕೊಡುವ ದೃಶ್ಯ ಮೊಬೈಲ್ವೊಂದರಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.