April 24, 2025
WhatsApp Image 2025-04-14 at 11.58.00 AM

ಉಡುಪಿ: ಮಾರ್ಚ್ 13 ರಂದು ದೂರುದಾರರಾದ ರಾಮಚಂದ್ರ ನಾಯಕ್ , ಪೊಲೀಸ್ ನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ ಇವರಿಗೆ ಉಡುಪಿ ತಾಲೂಕು 80 ಬಡಗಬೆಟ್ಟು ಗ್ರಾಮದ ಮಣಿಪಾಲ ತಾಂಗೋಡೆ 2ನೇ ಕ್ರಾಸ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಆರೀಬ್‌ ಅಹಮ್ಮದ್‌ ಎಂಬಾತನು ಆಂದ್ರ ಪ್ರದೇಶದ ವಿಜಯವಾಡದಿಂದ ತಂದಿದ್ದ ಗಾಂಜಾವನ್ನು ಮಾರಾಟ ಮಾಡಲು ಬರುತ್ತಿದ್ದು, ಆತನಿಂದ ಗಾಂಜಾ ಪಡೆಯಲು ಅಪರಿಚಿತರು ಬರುತ್ತಾರೆ ಎಂಬ ಬಗ್ಗೆ ದೊರೆತ ಮಾಹಿತಿ ಮೇರೆಗೆ, ಪಂಚರು ಹಾಗೂ ಸಿಬ್ಬಂದಿಯವರ ಸಹಕಾರದೊಂದಿಗೆ ಮೇಲಿನ ಸ್ಥಳಕ್ಕೆ ದಾಳಿ ನಡೆಸಿ, ಆರೀಬ್‌ ಅಹಮ್ಮದ್‌(31) ಎಂಬುವವನನ್ನು ದಸ್ತಗಿರಿಗೊಳಿಸಿ, ಪತ್ರಾಂಕಿತ ಅಧಿಕಾರಿಯವರಿಂದ ಆಪಾದಿತರ ಬಳಿ ಇದ್ದ ಯಾವುದೇ ಪರವಾನಿಗೆ ಇಲ್ಲದೇ, ಕಾನೂನು ಬಾಹಿರವಾಗಿ ಮಾರಾಟ ಮಾಡಲು ಹೊಂದಿದ್ದ 07 ಕಿಲೋ, 304 ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆದಿದ್ದು ಗಾಂಜಾದ ಅಂದಾಜು ಮೌಲ್ಯ ರೂ. 5,75,000/- ಆಗಿರುತ್ತದೆ.

ಆಪಾದಿತ ಬಳಸಿದ್ದ ಮೊಬೈಲ್ ಪೋನ್-2, ಅಂದಾಜು ಮೌಲ್ಯ ರೂ. 20,000/-, ಗಾಂಜಾವನ್ನು ಸಾಗಾಟ ಮಾಡಲು ಬಳಸಿದ್ದ ಬೆನ್ನಿಗೆ ಹಾಕಿಕೊಳ್ಳುವ ಬ್ಯಾಗ್-1 , ಕೈಯಲ್ಲಿ ಹಿಡಿದುಕೊಂಡಿದ್ದ Vimal Pan Masala ಎಂದು ಮುದ್ರಣ ಇರುವ ಕಪ್ಪು ಬಣ್ಣದ ಚೀಲ -1, ಹಾಗೂ ನಗದು ರೂಪಾಯಿ 1520/- ಇವುಗಳನ್ನು ಮುಂದಿನ ಕ್ರಮದ ಬಗ್ಗೆ ವಶಪಡಿಸಿಕೊಂಡಿರುವುದಾಗಿದೆ. ವಶಪಡಿಸಿಕೊಂಡಿರುವ ಸ್ವತ್ತುಗಳು ಒಟ್ಟು ಅಂದಾಜು ಮೌಲ್ಯ ರೂ. 5,96,520/- ಆಗಿರುತ್ತದೆ. ಆರೋಪಿತನು ವಿಜಯವಾಡದ ಸೈಕಲ್‌ ರಿಕ್ಷಾವಾಲ ನಿಂದ ಗಾಂಜಾ ಖರೀದಿಸಿರುವ ಬಗ್ಗೆ ನುಡಿದಿರುತ್ತಾನೆ.

ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 13/2025, ಕಲಂ 8(c), 20 (b) (ii), (B) NDPS Act 1985 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

About The Author

Leave a Reply

Your email address will not be published. Required fields are marked *

<p>You cannot copy content of this page.</p>