December 3, 2024
WhatsApp Image 2024-11-12 at 5.47.24 PM

ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಮಂಗಳೂರಿನ ಮೋತಿ ಮಹಲ್ ಹೋಟೆಲ್ ನಲ್ಲಿ ಪ್ರತಿಷ್ಟಿತ ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾ (PRCI) ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು.

ಉಡುಪಿಯ ಫ್ಯಾಷನ್ ತಾರೆ​ ವಿದ್ಯಾ ಸರಸ್ವತಿಯವರು ಚಾಣಕ್ಯ ಅವಾರ್ಡ್ಸ್ ವಿಭಾಗದ 2024 ನ “ಫ್ಯಾಷನ್ ಕ್ಯಾಟಲಿಸ್ಟ್ ಆಫ್ ದ ಇಯರ್” ಎಂಬ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.​ ಈ ಪ್ರಶಸ್ತಿಯನ್ನು ” ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ “ಸಚಿವರಾದ ಶ್ರೀ ಶ್ರೀಪಾದ್ ನಾಯಕ್ ರವರ ಮೂಲಕ ನೀಡಲಾಯಿತು.

ವಿದ್ಯಾ ಸರಸ್ವತಿಯವರು ಮಿಸೆಸ್ ಇಂಡಿಯಾ ಕರ್ಣಾಟಕದ “ವಾರಿಯರ್ ಕ್ವೀನ್” “ಟ್ರೆಡಿಷನಲ್ ವಿನ್ನರ್” ಆಗಿದ್ದಾರೆ. “2022ರ ಕ್ಯೂಟೆಸ್ಟ್ ಮೊಮ್” ಕಿರೀಟವನ್ನೂ ಪಡೆದಿದ್ದಾರೆ.​ ಜ್ಯುವೆಲ್ಲರಿ ಹಾಗೂ ಉಡುಪಿ ಕೈಮಗ್ಗ ಸೀರೆಯ ಮೊದಲ ರೂಪದರ್ಶಿಯೂ ಆಗಿದ್ದರು.

2023 ಹಾಗೂ 2024 ರಲ್ಲಿ ಉಡುಪಿ ಕೈಮಗ್ಗ ಸೀರೆಯನ್ನುಟ್ಟು ಸ್ವತಃ ರೂಪದರ್ಶಿಯಾಗಿ 2000 ಕ್ಯಾಲೆಂಡರ್ ನ್ನು ರಾಜ್ಯ ಅಂತರಾಜ್ಯಗಳಲ್ಲಿ ಹೋಗಿ ಜನರಿಗೆ ಹಂಚಿ​, ನೇಕಾರರಿಗೆ ಉತ್ತಮ ಪ್ರೋತ್ಸಾಹವನ್ನು ಕೊಟ್ಟಿ​ದ್ದರು . ಅಲ್ಲದೆ ಸತತವಾಗಿ 4 ವರ್ಷಗಳಿಂದ ಫ್ಯಾಷನ್ ಲೋಕದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ .​ ಇವರು ಉಡುಪಿ ತುಳುಕೂಟದ ಮಾಜಿ ಉಪಾಧ್ಯಕ್ಷರು , 2024 ರ ಆಟಿ ಕೂಟದ ಸಂಚಾಲಕಿಯಾಗಿ​ ದುಡಿದಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.