March 12, 2026
WhatsApp Image 2024-08-14 at 2.37.50 PM

ಮಲ್ಪೆ: ಗಣೇಶ ವಿಸರ್ಜನೆ ಸಂದರ್ಭ ಬಾಯಿಗೆ ಸೀಮೆ ಎಣ್ಣೆ ಹಾಕಿಕೊಂಡು ಬೆಂಕಿ ಉಗುಳುವ ವೇಳೆ ವ್ಯಕ್ತಿಯೊಬ್ಬರು ತೀವ್ರ ಅಸ್ವಸ್ಥಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಇಂದು ಸಂಭವಿಸಿದೆ. ಮಲ್ಪೆಯ ಸತೀಶ್‌ (39) ಮೃತ ವ್ಯಕ್ತಿ.ಅವರು ಮಲ್ಪೆ ಬೀಚ್‌ನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಬಾಯಿಗೆ ಸೀಮೆ ಎಣ್ಣೆ ಹಾಕಿಕೊಂಡು ಬೆಂಕಿಯೊಂದಿಗೆ ಹೊರಕ್ಕೆ ಉಗುಳುತ್ತಿದ್ದರು. ಈ ಸಮಯದಲ್ಲಿ ಆಕಸ್ಮಿಕವಾಗಿ ಸೀಮೆ ಎಣ್ಣೆ ಅವರ ಹೊಟ್ಟೆಯೊಳಗೆ ಹೋಗಿದೆ ಎನ್ನಲಾಗಿದೆ. ತೀವ್ರ ಅಸ್ವಸ್ಥಗೊಂಡು ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ತತ್‌ಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಅವರು ಚಿಕಿತ್ಸೆ ಫ‌ಲಿಸದೆ ಮೃತಪಟ್ಟರು.ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.