December 23, 2024
WhatsApp Image 2023-07-13 at 6.30.28 PM

ಮುಂಬೈ : ಮುಂಬೈ ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಂಗೆ 26/11 ದಾಳಿಯಂತೆಯೇ ಭಯೋತ್ಪಾದಕ ದಾಳಿ ನಡೆಸುವುದಾಗಿ ಬೆದರಿಕೆ ಕರೆ ಬಂದಿದೆ.

ಕರೆ ಮಾಡಿದವರು ಉರ್ದುವಿನಲ್ಲಿ ಮಾತನಾಡುತ್ತಾ, “ಸೀಮಾ ಹೈದರ್ ಹಿಂತಿರುಗದಿದ್ದರೆ ಭಾರತ ನಾಶವಾಗುತ್ತದೆ” ಎಂದು ಹೇಳಿದರು.

ಆಘಾತಕಾರಿಯೆಂದ್ರೆ, ಕರೆ ಮಾಡಿದವನು 26/11 ರಂತೆಯೇ ಭಯೋತ್ಪಾದಕ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾನೆ.

ಇನ್ನು ಒಂದು ವೇಳೆ ದಾಳಿ ನಡೆದರೆ ಅದಕ್ಕೆ ಉತ್ತರ ಪ್ರದೇಶ ಸರ್ಕಾರವೇ ಹೊಣೆಯಾಗಲಿದೆ ಎಂದು ಕರೆ ಮಾಡಿದವ ಹೇಳಿದ್ದಾನೆ. ಅಂದ್ಹಾಗೆ, ಮುಂಬೈ ಪೊಲೀಸ್ ಸಂಚಾರ ನಿಯಂತ್ರಣ ಕೊಠಡಿಗೆ ಜುಲೈ 12 ರಂದು ಈ ಕರೆ ಬಂದಿದೆ ಎನ್ನಲಾಗ್ತಿದೆ. ಇನ್ನು ಈ ಬಗ್ಗೆ ಮುಂಬೈ ಪೊಲೀಸರು ಮತ್ತು ಕ್ರೈಂ ಬ್ರಾಂಚ್ ತನಿಖೆ ನಡೆಸುತ್ತಿದ್ದಾರೆ. ಆದಾಗ್ಯೂ, ಹಿರಿಯ ಅಧಿಕಾರಿಗಳು ಇದನ್ನ ‘ಹುಸಿ ಕರೆ’ ಎಂದು ಕರೆದಿದ್ದಾರೆ.

ಅಂದ್ಹಾಗೆ, ಸುಮಾರು ಒಂದು ವಾರದಿಂದ ಗ್ರೇಟರ್ ನೋಯ್ಡಾದ ರಬೂಪುರ ನಿವಾಸಿಗಳಾದ ಸಚಿನ್ ಮತ್ತು ಪಾಕಿಸ್ತಾನಿ ಮಹಿಳೆ ಸೀಮಾಳ ಲವ್​ಸ್ಟೋರಿ ದೇಶಾದ್ಯಂತ ಚರ್ಚೆಯಾಗುತ್ತಿದೆ. PUBG ಆಡುವಾಗ ಹುಟ್ಟಿದ ಪ್ರೀತಿಗಾಗಿ, ಸೀಮಾ ತನ್ನ ನಾಲ್ಕು ಮಕ್ಕಳೊಂದಿಗೆ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದಾಳೆ. ಅಂದಿನಿಂದ ಇಲ್ಲಿಯೇ ವಾಸವಾಗಿದ್ದಾಳೆ.

About The Author

Leave a Reply

Your email address will not be published. Required fields are marked *

You cannot copy content of this page.