ಸಂಸತ್‌ ಸ್ಥಾನಕ್ಕೆ ಆಯ್ಕೆ ಹೈಕಮಾಂಡ್ ಗೆ ಬಿಟ್ಟ ವಿಚಾರ: ಅರುಣ್‌ ಕುಮಾರ್ ಪುತ್ತಿಲ

ಮಂಗಳೂರು: ರಾಜಕೀಯ ಅಧಿಕಾರಕ್ಕೋಸ್ಕರ ಕಾಂಗ್ರೆಸ್ ಉಚಿತ ಯೋಜನೆ ಜಾರಿಗೆ ತಂದಿದೆ. ಆದರೆ ಗ್ಯಾರೆಂಟಿ ಯೋಜನೆಗಳಿಗೆ ಅನುದಾನ ಹೇಗೆ ತರುತ್ತಾರೆ ಎಂಬುವುದು ಪ್ರಶ್ನೆಯಾಗಿದೆ. ಆರ್ಥಿಕ ಅನುಕೂಲ ಹೇಗೆ ಮಾಡುತ್ತಾರೆ ಎಂಬುದನ್ನು ಕಾದು ನೋಡೋಣ ಎಂದು ಪುತ್ತೂರಿನಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ, ಹಿಂದು ಸಂಘಟಕ ಅರುಣ್‌ ಕುಮಾರ್ ಪುತ್ತಿಲ ಹೇಳಿದ್ದಾರೆ.

ರಾಜ್ಯಾದ್ಯಂತ ಮದ್ಯ ಮಾರಾಟದ ಬೆಲೆಯನ್ನು 20 ರೂಪಾಯಿ ಏರಿಕೆ ಮಾಡಿದ್ದಾರೆ. ಇಂತಹ ಇನ್ನಷ್ಟು ಏರಿಕೆಗಳು ರಾಜ್ಯದಲ್ಲಿ ಆಗಬಹುದು. ಇದೀಗ ವಿದ್ಯುತ್  ದರ ಏರಿಕೆ ಆಗಿರುವುದು ರಾಜ್ಯಾದ್ಯಂತ ಚರ್ಚೆಯಾಗುತ್ತಿದೆ.

ದಕ್ಷಿಣ ಕನ್ನಡ ಸಂಸದ ಸ್ಥಾನಕ್ಕೆ ಪುತ್ತಿಲ ಅಭ್ಯರ್ಥಿ ಆಗಬೇಕು ಎಂಬ ಒತ್ತಡಕ್ಕೆ ಉತ್ತರಿಸಿದ ಅವರು ದ.ಕ ಲೋಕಸಭಾ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ ಬಿಜೆಪಿ ಹೈಕಮಾಂಡಿಗೆ ಬಿಟ್ಟು ವಿಚಾರ. ಸಾಮಾಜಿಕ ವ್ಯವಸ್ಥೆಯಲ್ಲಿ ಕಾರ್ಯಕರ್ತರಿಗೆ ಅಭ್ಯರ್ಥಿ ಯಾರು ಎಂದು ನಿರೀಕ್ಷೆ ಇರೋದು ಸಹಜ. ಪಕ್ಷ ಯಾರಿಗೆ ಟಿಕೆಟ್ ಕೊಡುತ್ತದೆ ಎಂದು ಮುಂದಿನ ದಿನದಲ್ಲಿ ಕಾದು ನೋಡೋಣ ಎಂದರು.

ಮಾಜಿ ಸಿಎಂ ಸದಾನಂದ ಗೌಡ ಬಿಜೆಪಿ ಮೇಲೆ ಬೇಸರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ರಾಜಕೀಯ ವ್ಯವಸ್ಥೆಯಲ್ಲಿ ಗೌರವ ಮತ್ತು ಶಿಕ್ಷೆ ಎರಡೂ ಸಿಗುತ್ತದೆ. ಸದಾನಂದ ಗೌಡ ಏನು ಮಾಡಿದ್ದಾರೆ ಎಂದು ಕರ್ನಾಟಕ ಜನತೆಗೆ ಗೊತ್ತಿದೆ. ಅವರ ನಿರ್ಧಾರ ಅವರಿಗೆ ಬಿಟ್ಟದ್ದು ನಾನು ಪ್ರತಿಕ್ರಿಯೆ ನೀಡಲ್ಲ ಎಂದರು.

Check Also

ಮಣಿಪಾಲ: CA ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ

ಮಣಿಪಾಲ : ಸಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆರ್ಗಾ ಗ್ರಾಮದಲ್ಲಿ ಸಂಭವಿಸಿದೆ. ಮೃತರನ್ನು ಚಿಕ್ಕಮಗಳೂರು ಜಿಲ್ಲೆಯ …

Leave a Reply

Your email address will not be published. Required fields are marked *

You cannot copy content of this page.