

ನಟ, ನಿರ್ದೇಶಕ ರಿಷಬ್ ಶೆಟ್ಟಿಯವರ ಬಹುನಿರೀಕ್ಷಿತ ಕಾಂತಾರ – 2 ಚಿತ್ರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಆಗಸ್ಟ್ 27ನೇ ತಾರೀಖು ಕಾಂತಾರ ಪ್ರೀಕ್ವೆಲ್ ಮುಹೂರ್ತ ನೆರವೇರಲಿದೆ. ಇನ್ನು ಕಳೆದ ಬಾರಿಯಂತೆ ಈ ಬಾರಿಯೂ ಆನೆಗುಡಿ ಗಣಪತಿ ದೇವಸ್ಥಾನದಲ್ಲೇ ಚಿತ್ರದ ಮುಹೂರ್ತ ಮಾಡಲು ಚಿತ್ರತಂಡ ತಯಾರಿ ನಡೆಸಿದೆಯೆಂದು ತಿಳಿದುಬಂದಿದೆ. ಹಾಗೇ ಈ ಬಾರಿ ಯಾರೆಲ್ಲಾ ಕಲಾವಿದರು ಇದ್ದಾರೆ ಎಂಬ ಬಗ್ಗೆ ಕುತೂಹಲ ಹೆಚ್ಚಿದೆ.