

ಜಮ್ಮು : ಭಾರತವನ್ನು ಕೆರಳುವಂತೆ ಮಾಡಿರುವ ದೊಡ್ಡ ಘಟನೆ ಪೆಹಲ್ಗಾಮ್ ದಾಳಿ. ಉ*ಗ್ರರು ದುಷ್ಕೃ*ತ್ಯ ಮೆರೆದು 26 ಮಂದಿಯ ಪ್ರಾ*ಣ ತೆಗೆದಿದ್ದರು. ಈ ಒಂದು ಘಟನೆ ಇದೀಗ ಭಾರತ ಮತ್ತು ಪಾಕ್ ನಡುವಿನ ಸಂಬಂಧ ಮತ್ತಷ್ಟು ಹಳಸುವಂತೆ ಮಾಡಿದೆ.
ಉಗ್ರರ ಅಟ್ಟಹಾಸಕ್ಕೆ ಪೂರ್ಣ ವಿರಾಮ ಹಾಕಲು ಭಾರತ ಪಣ ತೊಟ್ಟಿದ್ದು, ಇದೀಗ ಪೆಹಲ್ಗಾಮ್ ದಾ*ಳಿ ನಡೆಸಿದ ಮೂವರು ಶಂಕಿತ ಉಗ್ರರ ಪತ್ತೆಗೆ ಫೋಟೋ ಬಿಡುಗಡೆ ಮಾಡಲಾಗಿದೆ. ಅಲ್ಲದೇ, ಈ ಉಗ್ರರ ಬಗ್ಗೆ ಸುಳಿವು ಕೊಟ್ಟವರಿಗೆ 20 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ. ಅಲ್ಲಲ್ಲಿ ಈ ಬಗ್ಗೆ ಪೋಸ್ಟರ್‌ಗಳನ್ನು ಪೊಲೀಸರು ಅಂಟಿಸಿದ್ದಾರೆ. ‘ಭಯೋತ್ಪಾದಕ ಮುಕ್ತ ಜಮ್ಮು ಕಾಶ್ಮೀರ’ ಎಂದು ಬರೆದಿದ್ದಾರೆ. ಶಂಕಿತರ ಬಗ್ಗೆ ಮಾಹಿತಿ ನೀಡಿದವರ ಕುರಿತು ಗೌಪ್ಯತೆ ಕಾಪಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪೋಸ್ಟರ್‌ನಲ್ಲಿ ಮೂವರು ಉ*ಗ್ರರ ಫೋಟೋಗಳಿವೆ. ಲಷ್ಕರ್-ಇ-ತೋಯಿಬಾದ ಅನಂತ್‌ನಾಗ್ ನಿವಾಸಿ, ಆದಿಲ್ ಹುಸೇನ್ ಥೋಕರ್, ಪಾಕ್ ಪ್ರಜೆಗಳಾದ ಅಲಿ ಭಾಯ್ ಅಕಾ ತಲ್ಹಾ ಭಾಯ್ ಮತ್ತು ಹಶಿಮ್ ಮೂಸಾ ಅಕಾ ಸುಲೇಮಾನ್ ಫೋಟೋಗಳಿವೆ. ಇದನ್ನೂ ಓದಿ : 7 ನಗರಗಳಿಗೆ ಏರ್ ಇಂಡಿಯಾ, ಇಂಡಿಗೋ ವಿಮಾನ ಹಾರಾಟ ರದ್ದು ಎಪ್ರಿಲ್ 22 ರಂದು ಉಗ್ರ*ರು ಪೆಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 26 ಮಂದಿ ಅಸುನೀಗಿದ್ದರು. ಇದರ ಪ್ರತೀಕಾರವಾಗಿ ಭಾರತ ‘ಅಪರೇಷನ್ ಸಿಂದೂರ’ ಕಾರ್ಯಾಚರಣೆ ಆರಂಭಿಸಿದೆ. ಪಾಕ್ ಮೇಲೆ ದಾ*ಳಿ ನಡೆಸಿರುವ ಭಾರತೀಯ ಸೇನೆ ಈಗಾಗಲೇ ಉಗ್ರರ ಹಲವು ನೆಲೆಗಳನ್ನು, ಜೊತೆಗೆ ಉಗ್ರರನ್ನೂ ನಾಶ ಮಾಡಿದೆ.