April 13, 2026
WhatsApp Image 2026-04-13 at 9.09.58 AM

ಮುಸ್ಲಿಂ ಯುವಕನೊಬ್ಬ 16 ಕ್ಕೂ ಹೆಚ್ಚು ಹಿಂದೂ ಯುವತಿಯರ ಅಶ್ಲೀಲ ರೀತಿಯ ಫೋಟೋಗಳನ್ನ ಫೋನ್‌ನಲ್ಲಿ ಇಟ್ಟುಕೊಂಡು ಹಿಂದೂ ಸಂಘಟನೆಗಳ ಕೈಗೆ ತಗಲಾಕಿ ಕೊಂಡಿದ್ದಾನೆ. ಸದ್ಯ ಹಿಂದೂ ಸಂಘಟನೆಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೊಪ್ಪಳ ತಾಲೂಕಿನ ಕಂಪ್ಲಿ ಗ್ರಾಮದ ಮುಸ್ಲಿಂ ಯುವಕ ಮುಸ್ತಫಾ ಎಂಬಾತನ ಬಳಿ, 16 ಕ್ಕೂ ಹೆಚ್ಚು ಹಿಂದೂ ಯುವತಿಯರ ಜೊತೆಗಿನ ಫೋಟೋ ಹಾಗೂ ಅಶ್ಲೀಲ ವಿಡಿಯೊಗಳು ಪತ್ತೆಯಾಗಿವೆ. ಈತ ಪ್ರೀತಿ ಹೆಸರಲ್ಲಿ ಹಿಂದೂ ಯುವತಿಯರನ್ನ ಟಾರ್ಗೆಟ್ ಮಾಡಿ, ಅವರಿಗೆ ಡ್ರಗ್ಸ್ ಗಾಂಜಾ ನೀಡಿ ಅಶ್ಲೀಲ ವಿಡಿಯೊಗಳನ್ನ ಮಾಡಿಕೊಂಡಿದ್ದಾನೆ. ಜೊತೆಗೆ ತಾನೂ ಗಾಂಜಾ ಸೇದುವ ವಿಡಿಯೊಗಳು ಆತನ ಮೊಬೈಲ್‌ನಲ್ಲಿ ಪತ್ತೆಯಾಗಿವೆ. ಈತ ಹಿಂದೂ ಯುವತಿಯರನ್ನೆ ಟಾರ್ಗೆಟ್ ಮಾಡಿ ಅವರಿಗೆ ಆಸೆ ಆಮಿಷಗಳನ್ನ ತೋರಿಸಿ, ಲವ್ ಜಿಹಾದ್ ಮಾಡ್ತಾಯಿದ್ದ.

ವಿಶ್ವ ಹಿಂದೂ ಪರಿಷತ್‌ ಜಿಲ್ಲಾಧ್ಯಕ್ಷ ಡಾ. ಸಂಗಮೇಶ ಹಿರೇಮಠ ಈ ಕುರಿತು ದೂರು ನೀಡಿದ್ದು, ಮುಸ್ತಫಾ ಖಾದ್ರಿ ಇಲ್ಲಿನ ಜಿಲ್ಲಾಸ್ಪತ್ರೆ ಆವರಣದಲ್ಲಿ ವಿದ್ಯಾರ್ಥಿನಿಯೊಂದಿಗೆ ಸಂಶಯಾಸ್ಪದ ಹಾಗೂ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದಾನೆ ಎಂದು ದೂರು ಬಂದಿತ್ತು. ಆಗ ಯುವಕನ ಬಳಿಯಿದ್ದ ಮೊಬೈಲ್‌ ಕಸಿದುಕೊಂಡು ಪರಿಶೀಲಿಸಿ ದಾಗ ಒಂದು ಫೋನ್‌ನಲ್ಲಿ ಮೂರು ಸಾವಿರ ಫೋಟೊಗಳು, ಆರು ಸಾವಿರ ವಿಡಿಯೊಗಳು, ಮತ್ತೊಂದು ಫೋನ್‌ನಲ್ಲಿ ನಾಲ್ಕು ಸಾವಿರ ಯುವತಿಯರ ಫೋಟೊಗಳು ಹಾಗೂ 3,700 ವಿಡಿಯೊಗಳು ಇರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.

ಕೊಪ್ಪಳದಲ್ಲಿ ಆರೋಪಿ ಮುಸ್ತಫಾ ವಿರುದ್ಧ ಲವ್ ಜಿಹಾದ್ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಮುಸ್ತಫ ಖಾದ್ರಿಗೆ ಮಟ್ಕಾ ಬುಕ್ಕಿಗಳ ಲಿಂಕ್ ಇದೆ ಎಂದು ತಿಳಿದು ಬಂದಿದೆ. ಆರೋಪಿ ಮುಸ್ತಫ ಖಾದ್ರಿ ಕೊಪ್ಪಳ ತಾಲೂಕಿನ ಕಂಪ್ಲಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದ್ದು ಗೋವಾ ಮತ್ತು ಮುಂಬೈ ಇಬ್ಬರು ಮಟ್ಕಾ ಬುಕ್ಕಿಗಳ ಜೊತೆಗೆ ಲಿಂಕ್ ಹೊಂದಿದ್ದಾನೆ ಎನ್ನಲಾಗಿದೆ.

ಮಟ್ಕಾ ಬುಕ್ಕಿಗಳು ಈತನಿಗೆ ಹಣದ ಸಹಾಯ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಕೊಪ್ಪಳದಲ್ಲಿ ಮುಸ್ತಫಾಗೆ ಹಣದ ಸಹಾಯ ಮಾಡಲಾಗಿದ್ದು ಅದೇ ಕಾರಣಕ್ಕೆ ಹುಡುಗಿಯರ ಜೊತೆಗೆ ಆತ ಎಂಜಾಯ್ ಮಾಡುತ್ತಿದ್ದ. ಆರೋಪಿ ಮುಸ್ತಫಾ ಮೊಬೈಲ್ ನಲ್ಲಿ ಇದೀಗ ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ. ಹುಡುಗೀರ ಜೊತೆ ಅಶ್ಲೀಲ ವಿಡಿಯೋ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ವಿಡಿಯೋಗಳನ್ನು ಮುಸ್ತಫ ಬೇರೆಯವರಿಗೆ ರವಾನಿಸಿರುವ ಸಾಧ್ಯತೆ ಇದೆ ಈ ಬಗ್ಗೆ ಪೊಲೀಸರಿಗೆ ವಿಶ್ವ ಹಿಂದೂ ಪರಿಷತ್ ದೂರು ನೀಡಿದೆ.

About The Author

Leave a Reply

Your email address will not be published. Required fields are marked *

You cannot copy content of this page.