ಬೆಂಗಳೂರು: ಬೆಂಗಳೂರಿನಲ್ಲಿ ಘೋರ ದುರಂತ ಘಟನೆ ನಡೆದಿದೆ. ಕತ್ತು ಸೀಳಿ ಒಂಟಿ ಮಹಿಳೆಯ ಬರ್ಬರ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ನಂಜಪ್ಪ ಸರ್ಕಲ್ ಬಳಿ ಮನೆಯೊಂದರಲ್ಲಿ ನಡೆದಿದೆ.
ಮನೆಗೆ ನುಗ್ಗಿ 34 ವರ್ಷದ ಕೌಸರ್ ಮುಬೀನ ಬರ್ಬರ ಹತ್ಯೆಯಾದ ಮಹಿಳೆ.
ಕೌಸರ್ ಮನೆಗೆ ನುಗ್ಗಿ ಕೊಲೆಗೈದು ಆರೋಪಿ ಪರಾರಿಯಾಗಿದ್ದಾನೆ. ಆದರೆ ಈ ಕೊಲೆಗೆ ಯಾವುದೇ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬಳಿಕ ಕೊಲೆಗೆ ಕಾರಣ ಏನು ಎಂಬುದು ತಿಳಿದುಬರಲಿದೆ.