ಉಡುಪಿ: ವ್ಯವಹಾರದಲ್ಲಿ ಪಾಲುದಾರರಾಗಿ ಮಾಡಿ ಲಾಭ ಹಂಚಿಕೊಳ್ಳುವುದಾಗಿ ನಂಬಿಸಿ ಹಣ, ಚಿನ್ನ ಪಡೆದು 2 ಕೋಟಿ ರೂ. ವಂಚಿಸಿದ ಬಗ್ಗೆ ಉಡುಪಿಯ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ ಮರ್ಣೆ ನಿವಾಸಿ ಹಕೀಂ 15 ವರ್ಷಗಳಿಂದ ಕಾರ್ಕಳ ಮಾರ್ಕೆಟ್ ರಸ್ತೆಯಲ್ಲಿರುವ ಕಾಂಪ್ಲೆಕ್ಸ್‌ನಲ್ಲಿ ಸೇಲ್‌ಝೋನ್ ಎಂಬ ಮೊಬೈಲ್ ಸೇಲ್ಸ್ ಮತ್ತು ಸರ್ವೀಸ್ ಉದ್ಯಮು ನಡೆಸುತ್ತಿದ್ದರು.
ಅವರಿಗೆ ಪರಿಚಯಸ್ಥರಾದ ಅಬ್ದುಲ್ ರಹಿಮಾನ್, ಹಫೀಜ್ ಟಿ.ಎ., ಅಯ್ಯೂಬ್, ಸದಕತ್ತುಲ್ಲಾ , ಮೊಹಮ್ಮದ್ ಇವರು ವ್ಯವಹಾರದಲ್ಲಿ ಪಾಲುದಾರರನ್ನಾಗಿ ಮಾಡುವ ಭರವಸೆ ನೀಡಿ ಅವರಿಂದ ಹಣ, ಚಿನ್ನ ವಾಹನ ಪಡೆದುಕೊಂಡಿದ್ದರು.
ಅನಂತರದಲ್ಲಿ ಯಾವುದೇ ಲಾಭಾಂಶ ಅಥವಾ ಹಣವನ್ನು ನೀಡದೆ ವಂಚಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.