ಕಾರ್ಕಳ: ತಾಲ್ಲೂಕಿನ ಕಣಜಾರು ಪರಿಸರದಲ್ಲಿ ಚಿರತೆ ಹಾವಳಿ ತಪ್ಪಿಸಲು ಸಾರ್ವಜನಿಕರಿಂದ ಮನವಿ ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ಪರಿಸರದ ಜಡ್ಡಿನಕಟ್ಟ ನಿವಾಸಿ ವಾಸುದೇವ ಶೆಟ್ಟಿಗಾರ್ ಅವರ ಮನೆಯ ಸಮೀಪ ಬೋನನ್ನು ಇರಿಸಲಾಗಿತ್ತು.
ಅದರಲ್ಲಿ ಚಿರತೆಯು ಸೆರೆಯಾಗಿದ್ದು, ಚಿರತೆಯನ್ನು ಪಶುವೈದ್ಯರಿಂದ ತಪಾಸಣೆ ನಡೆಸಿ, ಕುದುರೆಮುಖ ರಾಷ್ಟೀಯ ಉದ್ಯಾನವನಕ್ಕೆ ಸುರಕ್ಷಿತವಾಗಿ ಬಿಡಲಾಯಿತು.
ಕಾರ್ಕಳ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಉಪ ವಲಯ ಅರಣ್ಯಾಧಿಕಾರಿ ಪ್ರಕಾಶ್ಚಂದ್ರ, ಜಯರಾಮ ಎ., ಗಸ್ತು ವನಪಾಲಕರಾದ ಶ್ರೀಧರ್ ನರೇಗಲ್, ಮಹಾಂತೇಶ ಗೋಡಿ, ಅರಣ್ಯ ವೀಕ್ಷಕರಾದ ಸಂಜೀವ ಪಿ., ಬಾಬು ಯಾನೆ ಪ್ರಕಾಶ್, ಶಮೀಮ್, ವಾಹನ ಚಾಲಕ ವಿತೇಶ್ ಶೆಟ್ಟಿ, ನಿತಿನ್ ಸಹಕರಿಸಿದರು.