ಉಡುಪಿ : ಬೆಂಬಲ ಬೆಲೆಯಡಿ ಕುಚಲಕ್ಕಿ ಖರೀದಿಗೆ ರಾಜ್ಯ ಸರಕಾರ ತೀರ್ಮಾನಿಸಿದ್ದು, ಜನವರಿಯಿಂದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪಡಿತರದಲ್ಲಿ ಲಭ್ಯವಾಗಲಿದೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕರಾವಳಿಯ ಮೂರೂ ಜಿಲ್ಲೆಗಳ 6.20 ಲಕ್ಷ ಪಡಿತರ ಚೀಟಿದಾರರಿಗೆ ಜನವರಿಯಿಂದ ಕೆಂಪು ಕುಚಲಕ್ಕಿಯನ್ನು ವಿತರಿಸಲಾಗುವುದು.
ಎರಡು ಕೆ.ಜಿ.ಸಾಮಾನ್ಯ ಅಕ್ಕಿ, ಮೂರು ಕೆ.ಜಿ. ಕುಚಲಕ್ಕಿ ನೀಡಲಾಗುತ್ತದೆ ಎಂದರು. ಕುಚಲಕ್ಕಿಯನ್ನು ಪಡಿತರ ಮೂಲಕ ಪೂರೈಸಬೇಕೆಂದು ಮೂರೂ ಜಿಲ್ಲೆಗಳ ಜನರು ಆಗ್ರಹಿಸಿದ್ದು, ಇದಕ್ಕೆ ಈಗ ಮುಖ್ಯಮಂತ್ರಿ ಒಪ್ಪಿದ್ದಾರೆ ಎಂದರು. ಡಿಸೆಂಬರ್‌ನಲ್ಲಿ ಕುಚಲಕ್ಕಿ ಭತ್ತ (ಜಯ, ಎಂಒ ಅಭಿಲಾಷಾ, ಜ್ಯೋತಿ ತಳಿ) ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತದೆ.ಅದಕ್ಕೆ ಹೆಚ್ಚುವರಿ ಮೊತ್ತ ಕೊಡಲು ರಾಜ್ಯ ಸರಕಾರ ಸಮ್ಮತಿಸಿದೆ. ಎಂದರು