

ಬೆಳ್ತಂಗಡಿ: ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ಆಯೋಜಿಸಿದ ರೈತರ ಹಕ್ಕುಗಳ ಕುರಿತ ಮೊದಲ ಜಾಗತಿಕ ವಿಚಾರ ಸಂಕಿರಣದಲ್ಲಿ ದಕ್ಷಿಣ ಕನ್ನಡದ ಬೆಳ್ತಂಗಡಿಯ ಕಿಲ್ಲೂರಿನ ಅಮೈ ದೇವರಾವ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ.
ವಿಚಾರ ಸಂಕಿರಣ ದೆಹಲಿಯಲ್ಲಿ ಇಂದು ಆರಂಭಗೊಂಡಿದ್ದು ಸೆ.15ರವರೆಗೆ ನಡೆಯಲಿದೆ. ಈ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ರಾಷ್ಟ್ರಪತಿಗಳು ಕೃಷಿಯಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಿದರು. ಅಮೈ ದೇವರಾವ್ ಐದು ಎಕರೆ ಗದ್ದೆಯಲ್ಲಿ 175ಕ್ಕೂ ಅಧಿಕ ಭತ್ತದ ತಳಿಗಳನ್ನು ಬೆಳೆದಿರುವ ಸಾಧಕ. ವರ್ಷಕ್ಕೆ ಎರಡು ಬೆಳೆ ಬೆಳೆಯುತ್ತಿದ್ದು, ಪ್ರತಿಸಲವೂ 50 ಕ್ವಿಂಟಾಲ್‌ಗಿಂತಲೂ ಅಧಿಕ ಇಳುವರಿ ಸಿಗುತ್ತಿದೆ. ಇವರ ಈ ಸಾಧನೆಗೆ ಇಂದು ಗೌವರ ದಕ್ಕಿದೆ.