March 21, 2026
WhatsApp Image 2024-08-12 at 10.21.50 AM
ಉಡುಪಿ: ನಗರದ ಅಂಬಲಪಾಡಿ ಬೈಪಾಸ್ ನಲ್ಲಿರುವ ಹಾಲು ಮಾರಾಟದ ಅಂಗಡಿಗೆ ನುಗ್ಗಿದ ಕಳ್ಳನೋರ್ವ ನಗದು ದೋಚಿರುವ ಘಟನೆ ನಡೆದಿದೆ. ಉಡುಪಿಯ ಬೈಪಾಸ್ ರಸ್ತೆಯ ಪೃಥ್ವಿ ಸೌಧದಲ್ಲಿರುವ ಅರುಣ್ ಶೆಟ್ಟಿ ಮಾಲಕತ್ವದ ಹಾಲು ಡಿಸ್ಟ್ರಿಬ್ಯೂಟರ್ ಸೆಂಟರ್ ನ ಬೀಗ ಮುರಿದು ರಾತ್ರಿ 11.30 ಕ್ಕೆ ನುಗ್ಗಿರುವ ಕಳ್ಳನೋರ್ವ ರೂ.35 ಸಾವಿರ ಹಣವನ್ನು ಲಪಟಾಯಿಸಿದ್ದಾನೆ.
ಒಂದು ಕಡೆಯ ಬೀಗ ಮುರಿದು ಕಳ್ಳತನ ನಡೆಸಿದ್ದು , ಸಿಸಿಟಿವಿಯಲ್ಲಿ ಕಳ್ಳತನದ ವಿಡಿಯೋ ರೆಕಾರ್ಡ್ ಆಗಿದೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.