

ಮಂಗಳೂರು: ಮೆಥಾಂಪೆಟಾಮೈನ್ ಮಾದಕ ದ್ರವ್ಯವನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಕೊಣಾಜೆ ಬಳಿ ನಡೆದಿದೆ.
ಕೆ.ಸಿ ರೋಡ್ ತಲಪಾಡಿ ನಿವಾಸಿಯಾಗಿರುವ ಅಬ್ಬುಲ್ ರಶೀದ್ ಮೊಯದ್ದೀನ್ (41),ದೇರಳಕಟ್ಟೆಯ ಆರೀಫ್ (40) ಬಂಧಿತರು.
ಕೊಣಾಜೆ ಪೊಲೀಸರಿಗೆ ಇವರು ಮೆಥಾಂಪೆಟಾಮೈನ್ ಮಾದಕ ದ್ರವ್ಯವನ್ನು ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಸಿಕ್ಕಿದೆ.ಅದರಂತೆ ಕೊಣಾಜೆ ಪಿಎಸ್ ಐ
ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದು, ಈ ವೇಳೆ ಇಬ್ಬರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬಂಧಿತರಿಂದ 20 ಗ್ರಾಂ ಮೆಥಾಂಪೆಟಾಮೈನ್ ಹಾಗೂ ಒಂದು ಸ್ಕೂಟರ್ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಶಪಡಿಸಿದ ಸೊತ್ತುಗಳ ಒಟ್ಟು ಮೌಲ್ಯ 1,06,500 ಎಂದು ಹೇಳಲಾಗಿದೆ.