ನಿಂಬೆ ಹಣ್ಣು (Lemon) ಮಿಟಮಿನ್ ಸಿ ಯ ಸಮೃದ್ಧ ಆಗರ. ಅಡುಗೆಯಲ್ಲಿ ಆರೋಗ್ಯಕ್ಕೆ , ಸೌಂದರ್ಯಕ್ಕೆ ಹೀಗೆ ಹತ್ತು ಹಲವು ವಿಧಗಳಲ್ಲಿ ನಿಂಬೆ ಅತ್ಯುಪಯುಕ್ತ. ನಿಂಬೆ ರಸವನ್ನು ಸೇವಿಸುವುದರಿಂದ ಆಯಾಸ ಮತ್ತು ಆಲಸ್ಯದಂತಹ (laziness) ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಇನ್ನೂ ಅನೇಕ ಜನರು ಈ ಒಣಗಿದ ನಿಂಬೆಹಣ್ಣುಗಳನ್ನು ಎಸೆಯುತ್ತಾರೆ. ಆದರೆ ತಜ್ಞರ ಪ್ರಕಾರ, ಒಣಗಿದ ನಿಂಬೆಹಣ್ಣುಗಳು ಅನೇಕ ಪ್ರಯೋಜನಗಳನ್ನು ಹೊಂದಿವೆ. ಈ ಒಣಗಿದ ನಿಂಬೆಯಲ್ಲಿ ವಿಟಮಿನ್ ಸಿ, ಕಬ್ಬಿಣ (iron), ಮೆಗ್ನೀಸಿಯಮ್, ಪೊಟ್ಯಾಸಿಯಮ್, ಸತು, ಸಕ್ಕರೆ, ಫೈಬರ್, ಕೊಬ್ಬು ಮತ್ತು ಪ್ರೋಟೀನ್ ಸಮೃದ್ಧವಾಗಿದೆ.
* ಕೀಲು ನೋವಿನಿಂದ ಬಳಲುತ್ತಿರುವವರು ಈ ನಿಂಬೆಹಣ್ಣಿನ ಸೇವನೆಯಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು.
* ಬಿಪಿ ಇರುವವರು ಒಣಗಿದ ನಿಂಬೆಹಣ್ಣಿನ ಸೇವನೆಯಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
* ನಿಂಬೆಯಲ್ಲಿ ಹೆಚ್ಚಿನ ವಿಟಮಿನ್ ಸಿ ಇರುವುದರಿಂದ ಚರ್ಮದ ಸಮಸ್ಯೆಗಳು (Skin problems) ಕಡಿಮೆಯಾಗುತ್ತವೆ.
* ಒಣಗಿದ ನಿಂಬೆ ಹೋಳುಗಳನ್ನು ನೀರು, ಐಸ್ ಅಥವಾ ಬಿಸಿ ಚಹಾದಲ್ಲಿ ಬಳಸಲಾಗುತ್ತದೆ.
* ಇದು ದೇಹದ ಕೊಬ್ಬನ್ನು (cholesterol) ಕಡಿಮೆ ಮಾಡಲು ಸಹಾಯ ಮಾಡುತ್ತದೆ.
* ಕೆಲವರು ಒಣಗಿದ ನಿಂಬೆಹಣ್ಣನ್ನು ಅಡುಗೆಯಲ್ಲಿಯೂ ಬಳಸುತ್ತಾರೆ. ಇದು ಅವರು ಅನಾರೋಗ್ಯಕ್ಕೆ ಒಳಗಾಗುವುದನ್ನು ತಡೆಯುತ್ತದೆ.
* ತೂಕ ನಷ್ಟಕ್ಕೆ ಇದು ತುಂಬಾ ಉಪಯುಕ್ತವಾಗಿದೆ.
* ಈ ಒಣಗಿದ ನಿಂಬೆಯನ್ನು ಮೀನು, ಸೂಪ್ ಮತ್ತು ತರಕಾರಿಗಳಲ್ಲಿ ಬಳಸಲಾಗುತ್ತದೆ.
* ಮಲಬದ್ಧತೆಯಂತಹ (Constipation) ಸಮಸ್ಯೆಯನ್ನು ನಿವಾರಿಸಲು ಈ ನಿಂಬೆಯನ್ನು ಬಳಸಬಹುದು.
* ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಇದು ತುಂಬಾ ಉಪಯುಕ್ತವಾಗಿದೆ.
* ಒಣ ನಿಂಬೆಹಣ್ಣಿನ ಸೇವನೆಯು ಆಯಾಸ ಮತ್ತು ಮಂದತೆಯಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
* ಒಣ ಲಿಂಬೆ ಪುಡಿಯನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತಡದಿಂದ (high blood pressure) ಮುಕ್ತಿ ಪಡೆಯಬಹುದು.