ಕೊಚ್ಚಿ : ಶಬರಿಮಲೆ ಅಯ್ಯಪ್ಪ ಸ್ವಾಮಿ ಪ್ರಸಾದ ಎಂದಾಗ ಎಲ್ಲರೂ ಭಕ್ತಿಯಿಂದ ಸ್ವೀಕಾರ ಮಾಡುತ್ತಾರೆ ಇದೀಗ ಇಂತಹ ದೇವಸ್ಥಾನದ ಪ್ರಸಾದ ಕ್ಕೆ ಬಳಸಿದ ಏಲಕ್ಕಿಯಲ್ಲಿ ಕೆಮಿಕಲ್ ಪತ್ತೆಯಾಗಿದ್ದು, ಮತ್ತೊಂದು ಆತಂಕಕ್ಕೆ ಕಾರಣವಾಗಿದೆ.
ಅಯ್ಯಪ್ಪ ಸ್ವಾಮಿ ಪ್ರಸಾದ ʻಅರಾವಣಂʼಗೆ ಬಳಸಲಾದ ಏಲಕ್ಕಿಯಲ್ಲಿ95 ಬಗೆಯ ಭಾರೀ ಪ್ರಮಾಣದ ಕ್ರಿಮಿನಾಶಕ ಪತ್ತೆಯಾಗಿದೆ. ಈ ನಿಟ್ಟಿನಲ್ಲಿ 6.5 ಕೋಟಿ ರೂ ಮೌಲ್ಯದ ಅಯ್ಯಪ್ಪ ಸ್ವಾಮಿ ಪ್ರಸಾದ ವ್ಯರ್ಥಮಾಡಲಾಗಿದೆ ಎಂಧು ಕೆಮಿಕಲ್ ಟೆಸ್ಟ್ ಮೂಲಕ ಮಾಹಿತಿ ಬಹಿರಂಗವಾಗಿದೆ.
ಈ ನಿಟ್ಟಿನಲ್ಲಿ ಕೇರಳ ಹೈಕೋರ್ಟ್ ʻಅರಾವಣಂʼ ಪ್ರಸಾದವನ್ನು ಭಕ್ತರಿಗೆ ವಿತರಣೆ ಮಾಡುವುದಕ್ಕೆ ತಡೆಯಾಜ್ಞೆ ನೀಡಲಾಗಿದೆ.ನ್ಯಾಯಮೂರ್ತಿ ಅನಿಲ್ ಕೆ. ನರೇಂದ್ರನ್ ಮತ್ತು ನ್ಯಾಯಮೂರ್ತಿ ಪಿಜಿ ಅಜಿತ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಮಹತ್ವದ ನಿರ್ದೇಶನ ನೀಡಿದೆ. ಈಗಾಗಲೇ 6.5 ಕೋಟಿ ರೂ ಮೌಲ್ಯದ ಅಯ್ಯಪ್ಪ ಸ್ವಾಮಿ ಪ್ರಸಾದ ಸಿದ್ದತೆ ಮಾಡಲಾಗಿತ್ತು.
ಏಳು ಟನ್ ಏಲಕ್ಕಿಯನ್ನು ಈ ಬಾರೀ 10.9 ಲಕ್ಷ ರೂ,ಗೆ ಓಪನ್ ಟೆಂಡರ್ ಇಲ್ಲದೇ ಖರೀದಿಸಲಾಗಿತ್ತು.ಆ ದ್ರೆ ಏಲಕ್ಕಿ ಇಲ್ಲದೇ ʻಅರಾವಣಂʼ ಪ್ರಸಾದವನ್ನು ತಯಾರಿಸಲು ನಿನ್ನೆಯಿಂದ ಸಿದ್ದತೆ ಮಾಡಲಾಗುತ್ತಿದೆ. ಇಂದು ಬೆಳಗ್ಗೆಯಿಂದ ಏಲಕ್ಕಿ ಇಲ್ಲದೇ ಇರುವ ಅರಾವಣಂʼ ಪ್ರಸಾದ ಕೌಂಟರ್‌ನಲ್ಲಿ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ. ಈ ಭಾರೀ ದೇವಸ್ಥಾನಕ್ಕೆ ಏಲಕ್ಕಿಯಲ್ಲಿ ಕೆಮಿಕ್ ಪತ್ತೆಯಾದ ಕಾರಣ ಭಾರೀ ನಷ್ಟ ಸಂಭವಿಸಿರಬಹುದು