March 14, 2026
ms-111023-angnvadi

ಪುಂಜಾಲಕಟ್ಟೆ: ಬಡಗ ಕಜೆಕಾರು ಗ್ರಾಮದ ಕೆದಿಮೇಲು ಅಂಗನವಾಡಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಅಂಗನವಾಡಿ ಸಹಾಯಕಿ ಕುಸಿದು ಬಿದ್ದು ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತರನ್ನು ಅಂಗನವಾಡಿ ಸಹಾಯಕಿ ಕನೆಜಾಲು ನಿವಾಸಿ ವಸಂತಿ ಕೆದಿಮೇಲು (43) ಎಂದು ಗುರುತಿಸಲಾಗಿದೆ. ಮಧ್ಯಾಹ್ನ ಅಂಗನವಾಡಿ ಕೇಂದ್ರದಲ್ಲಿ ಕರ್ತವ್ಯದಲ್ಲಿ ಇರುವಾಗಲೇ ಅಂಗನವಾಡಿ ಸಹಾಯಕಿ ವಸಂತಿ ನಾಯ್ಕ್ ಕುಸಿದು ಬಿದ್ದು ಅಸೌಖ್ಯಕ್ಕೀಡಾಗಿದ್ದರು. ಇವರನ್ನು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮೃತರು ಪತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಪತಿ ಮಂಗಳೂರಿನಲ್ಲಿ ಹೊಟೇಲ್ ಕಾರ್ಮಿಕರಾಗಿದ್ದಾರೆ.

ನೊಂದ ಕುಟುಂಬಕ್ಕೆ ಸರ್ಕಾರದಿಂದ ಎನ್ ಪಿ ಎಸ್ ಸಹಿತ ಸೂಕ್ತ ಪರಿಹಾರ ನೀಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಆಗ್ರಹಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.