ಮಂಗಳೂರು: ಸೊಸೆಯೊಬ್ಬಳು ತನ್ನ ವೃದ್ದ ಮಾವನಿಗೆ ಮನಸೊ ಇಚ್ಚೆ ಹಲ್ಲೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಇದೀಗ ಆರೋಪಿ ಸೊಸೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಲ್ಲೆ ಮಾಡಿದ ಸೊಸೆ ಉಮಾಶಂಕರಿ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಕುಲಶೇಖರ ನಿವಾಸಿ ಪದ್ಮನಾಭ ಸುವರ್ಣ(86) ಎಂದು ಗುರುತಿಸಲಾಗಿದೆ.
ಕರಾವಳಿಯ ಬುದ್ದಿವಂತರ ಜಿಲ್ಲೆಯಲ್ಲೇ ಈ ರೀತಿ ಅಮಾನವೀಯ ಕೃತ್ಯ ನಡೆದಿದ್ದು, ಜನಸಾಮಾನ್ಯರು ತಲೆ ತಗ್ಗಿಸುವಂತಾಗಿದೆ. ಬಂಧಿತ ಉಮಾಶಂಕರಿ ಅವರು ಸರಕಾರಿ ಅಧಿಕಾರಿ ಎಂದು ತಿಳಿದು ಬಂದಿದ್ದು, ಘಟನೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.