ವಿಟ್ಲ: ಕರ್ಣಾಟಕ ಬ್ಯಾಂಕ್‌ನ ಅಡ್ಯನಡ್ಕ ಶಾಖೆಯಲ್ಲಿ ನಡೆದ ಕೋಟ್ಯಂತರ ನಗ ನಗದು ಕಳ್ಳತನ ಪ್ರಕರಣ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸ್ ಇಲಾಖೆಯ ವಿಶೇಷ ತಂಡ ತನಿಖೆ ಕೈಗೆತ್ತಿಕೊಂಡಿದ್ದು, ಬ್ಯಾಂಕ್‌್ ಹಾಗೂ ಅಕ್ಕಪಕ್ಕ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದೆ. ಇದರ ಆಧಾರದಲ್ಲಿ ಕಳ್ಳತನಕ್ಕೆ ಆಗಮಿಸಿದ್ದ ವಾಹನದ ಸುಳಿವು ಸಿಕ್ಕಿದ್ದು, ಮತ್ತಷ್ಟು ವಾಹನ ನಿಖರತೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ದೃಶ್ಯಾವಳಿ ಕಳುಹಿಸಲಾಗಿದೆ.
ಇನ್ನು ಕಳ್ಳರು ಮೊದಲೇ ಬ್ಯಾಂಕ್‌ನ ಸಮಗ್ರ ಮಾಹಿತಿ ಪಡೆದುಕೊಂಡಿದ್ದು, ಎಲ್ಲಾ ಚಟುವಟಿಕೆಗಳನ್ನು ವೀಕ್ಷಿಸಿ ಬಳಿಕ ಕಿಟಕಿ ಮೂಲಕ ನುಗ್ಗಿದ್ದಾರೆ.
ಭಾರೀ ಮೊತ್ತದ ಕಳವು ನಡೆದ ಬಳಿಕ ಬ್ಯಾಂಕ್ ನನ್ನು ಸಂಪೂರ್ಣವಾಗಿ ಭದ್ರತೆಗೊಳಿಸಲಾಗುತ್ತಿದ್ದು, ಕಿಟಕಿಯನ್ನು ಸಂಪೂರ್ಣ ಬಂದ್ ಮಾಡಲಾಗುತ್ತಿದೆ. ಹಳೆ ಕಪಾಟುಗಳನ್ನು ಹೊರ ಹಾಕಿ ನವೀಕರಿಸಲಾಗುತ್ತಿದ್ದು, ಸೋಮವಾರವು ಶಾಖೆ ನಿರ್ವಹಿಸುವುದು ಅನುಮಾನವಾಗಿದೆ.
ಈಗ ಬ್ಯಾಂಕ್‌ನಲ್ಲಿ ಹೆಚ್ಚಿನ ಸುರಕ್ಷತಾ ಕ್ರಮ ಅಳವಡಿಸಲಾಗಿದ್ದು, ಸೋಮವಾರವೂ ಶಾಖೆ ಕಾರ್ಯ ನಿರ್ವಹಿಸುವುದು ಅನುಮಾನ ಎನ್ನಲಾಗಿದೆ.