
ಕಾರ್ಕಳ : ನಿಟ್ಟೆ ಮಂಜಲ್ಪಾಕೆ ರಾಜ್ಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಹಾಗೂ ಜೀಪು ಡಿಕ್ಕಿ ಹೊಡೆದ ಘಟನೆ ಇಂದು ನಡೆದಿದೆ.
ಮಂಗಳೂರಿನಿಂದ ಮುಂಬಯಿಗೆ ಹೊರಟ ಖಾಸಗಿ ಬಸ್ಸು ಹಾಗೂ ಜೀಪು ಮುಖಾಮುಖಿ ನಿಟ್ಟೆ ಮಂಜಲ್ಪಾಕೆ ರಾಜ್ಯ ಹೆದ್ದಾರಿಯಲ್ಲಿ ಮುಖಾಮುಖಿ ಅಪಘಾತ ಸಂಭವಿಸಿದೆ.

ವಾಹನಗಳಲ್ಲಿ ಇದ್ದ ಕೆಲ ಪ್ರಯಾಣಿಕರು ಗಾಯಗೊಂಡಿದ್ದು, ಘಟನಾ ಸ್ಥಳಕ್ಕೆ ಅಗಮಿಸಿದ 108 ಆಂಬುಲೆನ್ಸ್ ಸಿಬ್ಬಂದಿಗಳು ಗಾಯಾಳುಗಳನ್ನು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
108 ಅಂಬುಲೆನ್ಸ್ ನ ಇಎಂಟಿ ದೇವಕಿ, ಪೈಲೇಟ್ ಕೊಟ್ರೇಶ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
