ಮಂಗಳೂರು : ಮಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ನಗರದ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
ಈ ಬಗ್ಗೆ ವಿದ್ಯಾರ್ಥಿನಿ ತಾಯಿ ಕದ್ರಿ ಠಾಣೆಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.
ನಗರದ ಬಿಜೈಯ ಅಪಾರ್ಟ್ ಮೆಂಟ್ ಒಂದರಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ ದಂಪತಿ ಮಗಳು ಈಕೆಯಾಗಿದ್ದು ನಗರದ ಕಾಲೇಜ್ ಒಂದರಲ್ಲಿ ದ್ವಿತೀಯ ಪಿಯುಸಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ನಿನ್ನೆ ರಾತ್ರಿ ತಾಯಿ ಅಪಾರ್ಟ್ ಗಳ ಕಸ ಸಂಗ್ರಹಿಸಲು ತೆರಳಿದ್ದಾಗ ರೂಮ್ ನಲ್ಲಿ ಒಬ್ಬಳೇ ಇದ್ದ ವಿದ್ಯಾರ್ಥಿನಿ ಬಾಗಿಲು ಲಾಕ್ ಮಾಡಿ ಫ್ಯಾನಿಗೆ ನೇಣಾಕಿ ಆತ್ಮಹತ್ಯೆ ಕೊಂಡಿದ್ದಾಳೆ. ಕಸ ಬಿಸಾಡಿ ವಾಪಸ್ ಬಂದಾಗ ರೂಂ ಬಾಗಿಲು ಲಾಕ್ ಆಗಿದ್ದು ಎಷ್ಟೇ ಬಡಿದರೂ ಬಾಗಿಲು ತೆರೆಯದನ್ನು ನೋಡಿ ಕಿಟಿಕಿಯಿಂದ ಗಮನಿಸಿದಾಗ ಮಗಳು ಫ್ಯಾನ್‌ಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಕೂಡಲೇ ಅಪಾರ್ಟ್ ಮೆಂಟ್ ನವರು ಬಾಗಿಲು ಒಡೆದು ಕುಣಿಕೆಯಿಂದ ಕೆಳಗಿಸಿ ಉಪಚರಿಸಲು ಯತ್ನಿಸಿದ್ದರೂ ಅದಾಗಲೇ ಆಕೆಯ ಪ್ರಾಣ ಪಕ್ಷಿ ಹಾರಿಯಾಗಿತ್ತು. ಪರೀಕ್ಷೆಯಲ್ಲಿ ಫೇಲ್ ಆಗಿದ್ದೇ ನೊಂದು ಈ ಕೃತ್ಯ ಮಾಡಿದ್ದಾಳೆ ಎಂದು ವಿದ್ಯಾರ್ಥಿನಿಯ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿ ತನಿಖೆ ನಡೆಸುತ್ತಿದ್ದಾರೆ.