ಉಡುಪಿ: ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿನಿಯರ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಕರಣವನ್ನು ಸಿಐಡಿಗೆ ರಾಜ್ಯ ಸರಕಾರ ನೀಡಿದ್ದು, ತನಿಖೆ ಪುನರಾರಂಭಗೊಂಡಿದೆ.
ಪ್ರಕರಣದ ಮರು ತನಿಖೆ ನಡೆಸಲು ಸಿಐಡಿ ಅಧಿಕಾರಿಗಳು ಬೊಂಬೆಯನ್ನು ಸೃಷ್ಟಿಸಿ ತನಿಖೆ ಆರಂಭಿಸಿದ್ದಾರೆ.
ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್ಮೆಂಟ್ (ಸಿಐಡಿ) ಎಸ್ ಪಿ ರಾಘವೇಂದ್ರ ಹೆಗಡೆ ಪ್ರಕರಣದ ತನಿಖೆ ಶುರು ಮಾಡಿದ್ದಾರೆ.
ಕೃತ್ಯ ನಡೆದ ಕಾಲೇಜಿಗೆ ಭೇಟಿ ಕೊಟ್ಟ ಸಿಐಡಿ ತಂಡ ಮಾಹಿತಿಗಳನ್ನು ಕಲೆ ಹಾಕಿದೆ.
ಸಂತ್ರಸ್ತೆಯ ಹೇಳಿಕೆಯನ್ನು ಪಡೆದುಕೊಳ್ಳಲಾಗಿದೆ.
ಕಾಲೇಜಿನ ಆಡಳಿತ ಮಂಡಳಿ ಸಿಬ್ಬಂದಿಯನ್ನು ವಿಚಾರಣೆ ಮಾಡಿ ದಾಖಲೆಗಳನ್ನು ಸಂಗ್ರಹ ಮಾಡಿದ್ದಾರೆ.
ರಾಜ್ಯ ರಾಷ್ಟ್ರದಲ್ಲಿ ಪ್ರಕರಣ ಗಮನ ಸೆಳೆದಿರುವ ಕಾರಣ, ವಿಭಿನ್ನ ಆಯಾಮಗಳಲ್ಲಿ ಸಿಐಡಿ ತನಿಖೆ ಮಾಡಲಾಗುತ್ತಿದೆ.
ಜು. 18ರಂದು ನಡೆದ ಘಟನೆಯನ್ನು ಸಿಐಡಿ ಮರು ಸೃಷ್ಟಿ ಮಾಡಿದೆ.
ಈ ತನಿಕಾ ಪ್ರಕ್ರಿಯೆಗೆ ಪ್ಲಾಸ್ಟಿಕ್ ಗೊಂಬೆಯನ್ನು ಬಳಕೆ ಮಾಡಿದ್ದಾರೆ.
ಗೊಂಬೆ ಬಳಸಿ, ಫೋಟೋ ವೀಡಿಯೋ ಮಾಡಿ ಸಿಐಡಿ ಅಧಿಕಾರಿಗಳು ಎಲ್ಲಾ ಆಯಾಮಗಳಲ್ಲಿ ಪ್ರಕರಣದ ತನಿಖೆ ಮಾಡುತ್ತಿದ್ದಾರೆ.
ಡಿವೈಎಸ್‌ಪಿ ಅಂಜುಮಾಲಾ ನಾಯಕ್ ಸಹಿತ ಇತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.