December 5, 2025
WhatsApp Image 2025-07-10 at 9.55.03 AM
ರಾಜ್ಯದಲ್ಲಿ ಬಾಲ ಗರ್ಭಿಣಿಯರ  ಸಂಖ್ಯೆ ಆತಂಕಕಾರಿಯಾಗಿ ಏರಿಕೆಯಾಗುತ್ತಿದೆ. ರಾಜ್ಯ ಆರೋಗ್ಯ ಇಲಾಖೆಯ 2024ರ ಏಪ್ರಿಲ್‌ನಿಂದ 2025ರ ಮೇ ತನಕದ ಸರ್ವೇ ಡೇಟಾ ರಿವೀಲ್​ ಮಾಡಿದೆ. ಇದರಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಾಲಕಿಯರು ಓದೋ ವಯಸ್ಸಿನಲ್ಲಿಯೇ ಗರ್ಭ ಧರಿಸಿ ಗರ್ಭಿಣಿಯರಾಗಿದ್ದಾರೆ. ಇದರಲ್ಲಿ ಆಘಾತಕಾರಿಯೆಂದರೆ, 9 ರಿಂದ 12 ವರ್ಷದೊಳಗಿನ ಮಕ್ಕಳು ಕೂಡ ಸೇರಿದ್ದಾರೆ. 
ಆರೋಗ್ಯ ಇಲಾಖೆ ವರದಿಯ ಪ್ರಕಾರ ಒಂದು ವರ್ಷದಲ್ಲಿ 31,663 ಬಾಲಕಿಯರು ಗರ್ಭಿಣಿಯರಾಗಿದ್ದಾರೆ. ಇದರಲ್ಲಿ ಆಘಾತಕಾರಿಯೆಂದರೆ, 9 ರಿಂದ 12 ವರ್ಷದೊಳಗಿನ 33 ಬಾಲಕಿಯರು ಗರ್ಭಿಣಿಯರಾಗಿರುವುದು.

ಬೆಚ್ಚಿ ಬೀಳಿಸುತ್ತೆ ಬಾಲ ಗರ್ಭಿಣಿಯರ ಆಘಾತಕಾರಿ ಅಂಕಿಅಂಶ!

ಈ ಅಂಕಿಅಂಶಗಳು ರಾಜ್ಯದ ಸಾಮಾಜಿಕ ಮತ್ತು ಆರೋಗ್ಯ ವ್ಯವಸ್ಥೆಯಲ್ಲಿ ಗಂಭೀರ ಸಮಸ್ಯೆಯನ್ನು ಎತ್ತಿ ತೋರಿಸುತ್ತವೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 3,271 ಮತ್ತು ಬೆಳಗಾವಿಯಲ್ಲಿ 3,158 ಪ್ರಕರಣಗಳು ವರದಿಯಾಗಿವೆ, ಇವು ರಾಜ್ಯದಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ಜಿಲ್ಲೆಗಳಾಗಿವೆ.

About The Author

Leave a Reply

Your email address will not be published. Required fields are marked *

You cannot copy content of this page.