May 30, 2025 6:49:05 PM
WhatsApp Image 2023-07-10 at 6.24.40 PM

ಆಸ್ಪತ್ರೆಯಲ್ಲಿ ಡಾಕ್ಟರ್‌ಗಿಂತ ಹೆಚ್ಚು ರೋಗಿಗಳನ್ನು ಸುಶ್ರೂಷೆ ಮಾಡುವುದು, ಆರೈಕೆ ಮಾಡಿ ಗುಣಮುಖವಾಗಿಸುವುದು ನರ್ಸ್ ಗಳು. ಆದರೆ ಇಲ್ಲೊಬ್ಬ ಮಹಿಳಾ ನರ್ಸ್‌ಗೆ ಆಸ್ಪತ್ರೆ ದಾಖಲಾದ ರೋಗಿ ಜೊತೆಗೆ ಲವ್ ಶುರುವಾಗಿತ್ತು. ಲವ್ ಆದ ಕೆಲವೇ ದಿನಗಳಲ್ಲಿ ರೋಗಿ ಜೊತೆ ದೈಹಿಕ ಸಂಪರ್ಕ ಶುರು ಮಾಡಿದ್ದಾಳೆ. ಆದರೆ ಸೆಕ್ಸ್ ವೇಳೆಯೆ ರೋಗಿ ಮೃತಪಟ್ಟ ಘಟನೆ ಯುನೈಟೆಡ್ ಕಿಂಗ್‌ಡಮ್‌ನ ವೇಲ್ಸ್‌ ನಲ್ಲಿ ನಡೆದಿದೆ.

ಒಂದು ವರ್ಷದ ಹಿಂದೆ ಆಸ್ಪತ್ರೆ ದಾಖಲಾಗಿದ್ದ ರೋಗಿ ಜೊತೆಗೆ 42 ವರ್ಷದ ನರ್ಸ್ ಪೆನೆಲೋಪ್ ವಿಲಿಯಮ್ಸ್‌ಗೆ ಲವ್ ಆಗಿತ್ತು ಎನ್ನಲಾಗಿದೆ. ಸುದೀರ್ಘ ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರೋಗಿ ಜೊತೆಗಿನ ಪ್ರೀತಿ ಎಲ್ಲೆ ಮೀರಿತ್ತು. ಚಿಕಿತ್ಸೆ ಪಡೆದು ಗುಣಮುಖರಾದ ರೋಗಿ ಆಸ್ಪತ್ರೆಯಿಂದ ಬಿಡುಗಡೆಯಾದರೂ ನರ್ಸ್ ಮಾತ್ರ ರೋಗಿಯನ್ನು ಬಿಟ್ಟಿರಲಿಲ್ಲ.
ರೋಗಿ ಆಸ್ಪತ್ರೆಯಿಂದ ಬಿಡುಗಡೆಯಾದರೂ ಡಯಾಲಿಸ್ ಸೇರಿದಂತೆ ಹಲವು ಚಿಕಿತ್ಸೆಗಾಗಿ ಪ್ರತಿ ತಿಂಗಳು ಆಸ್ಪತ್ರೆಗೆ ಬರಲೇಬೇಕಿತ್ತು. ಹೀಗೆ ಆಸ್ಪತ್ರೆ ಬಂದ ರೋಗಿ ಜೊತೆ ನರ್ಸ್ ದೈಹಿಕ ಸಂಪರ್ಕ ಮಾಡಿದ್ದಾರೆ ಎನ್ನಲಾಗಿದೆ. ಡಯಾಲಿಸಿಸ್‌ಗಾಗಿ ಆಸ್ಪತ್ರೆ ಬಂದಿದ್ದ ರೋಗಿಯನ್ನು ಕರೆದುಕೊಂಡು ಪಾರ್ಕಿಂಗ್ ಆವರಣಕ್ಕೆ ತೆರಳಿದ ನರ್ಸ್, ಕಾರಿನಲ್ಲಿ ದೈಹಿಕ ಸಂಪರ್ಕದ ಆಟ ಶುರುಮಾಡಿದ್ದಾರೆ.

ಕಿಡ್ನಿ ಸಮಸ್ಸೆ ಬಳಲುತ್ತಿದ್ದ ರೋಗಿ ಈ ವೇಳೆ ಅಸ್ವಸ್ಥಗೊಂಡಿದ್ದಾನೆ. ಆದರೆ ನರ್ಸ್ ಮಾತ್ರ ತನ್ನ ಕಾಮತೃಷೆ ತೀರಿಸಿಕೊಂಡಿದ್ದಾಳೆ. ತೀವ್ರ ಅಸ್ವಸ್ಥನಾಗಿ ಕುಸಿದ ರೋಗಿಯನ್ನು ಆಸ್ಪತ್ರೆ ದಾಖಲಿಸುವ ಪ್ರಯತ್ನಕ್ಕೆ ನರ್ಸ್ ಹೋಗಿಲ್ಲ, ಆ್ಯಂಬುಲೆನ್ಸ್ ಪಕ್ಕದಲ್ಲೇ ಇದ್ದರೂ ಹೆದರಿ ನೆರವು ಪಡೆಯಲಿಲ್ಲ. ರೋಗಿಯನ್ನು ಕಾರಿನಲ್ಲೇ ಬಿಟ್ಟು ನರ್ಸ್ ಮತ್ತೆ ತನ್ನ ಕರ್ತವ್ಯಕ್ಕೆ ಮರಳಿದ್ದಾರೆ ಎನ್ನಲಾಗಿದೆ. ಕಿಡ್ನಿ ಸಮಸ್ಯೆ ಜೊತೆಗೆ ಹೃದಯಾಘಾತದಿಂದ ರೋಗಿ ಕಾರಿನಲ್ಲೇ ಮೃತಪಟ್ಟಿದ್ದಾನೆ. ಆಸ್ಪತ್ರೆ ಸಿಬ್ಬಂದಿಗಳು ಪಾರ್ಕಿಂಗ್‌ನತ್ತ ತೆರಳಿದಾಗ ವ್ಯಕ್ತಿಯೊಬ್ಬರು ಕಾರಿನಲ್ಲಿ ಮೃತಪಟ್ಟಿರುವುದು ಬೆಳೆಕಿಗೆ ಬಂದಿದೆ. ತಕ್ಷಣ ವೈದ್ಯರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಡಯಾಲಿಸ್‌ಗೆ ಬಂದ ರೋಗಿ ಮೃತಪಟ್ಟಿರುವುದು ದೃಢವಾಗಿದೆ. ಆದರೆ ಬೆತ್ತಲಾಗಿ ಕಾರಿನಲ್ಲಿ ಮೃತಪಟ್ಟಿರುವುದು ಅನುಮಾನಕ್ಕೆ ಕಾರಣಾಗಿತ್ತು. ಹೀಗಾಗಿ ಪೊಲೀಸ್ ತನಿಖೆ ಶುರುಮಾಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಆಸ್ಪತ್ರೆ ಇತರ ನರ್ಸ್ ವಿಚಾರಣೆ ವೇಳೆ ಆಫೈರ್ ಇದ್ದ ಮಾಹಿತಿ ಲಭ್ಯವಾಗಿದೆ. ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ನರ್ಸ್ ಹಾಗೂ ರೋಗಿ ಕಾರಿನಲ್ಲಿರುವ ದೃಶ್ಯಗಳು ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.

About The Author

Leave a Reply

Your email address will not be published. Required fields are marked *

<p>You cannot copy content of this page.</p>