May 28, 2025 4:39:26 AM
Nandini-milk-pr20183

ಬೆಂಗಳೂರು: ಈಗಾಗಲೇ ನಂದಿನಿ ಹಾಲು, ಮೊಸರು, ತುಪ್ಪ ಸೇರಿದಂತೆ ನಂದಿನಿ ಉತ್ಪನ್ನಗಳ ದರವನ್ನು ಕೆಎಂಎಫ್ ನಿಂದ ಹೆಚ್ಚಳ ಮಾಡಲಾಗಿತ್ತು. ಈಗ ನಂದಿನಿ ಜಂಬೂ ಹಾಲಿನ ದರವನ್ನು  3 ರೂ ಹೆಚ್ಚಳ ಮಾಡಿ ಆದೇಶಿಸಿದೆ.

ಈ ದರ ನಾಳೆಯಿಂದಲೇ ಜಾರಿಗೆ ಬರಲಿದೆ ಎಂಬುದಾಗಿ ಹೇಳಿದೆ.

ಈ ಕುರಿತಂತೆ ಮಾಹಿತಿ ನೀಡಿರುವಂತ ಕೆಎಂಎಫ್, ಜಂಬೂ ಪ್ಯಾಕೇಟ್ ಹಾಲಿನದ ದರವನ್ನು 3 ರೂ ಹೆಚ್ಚಳ ಮಾಡಲಾಗುತ್ತಿದೆ. ದರ ಹೆಚ್ಚಳದ ಹಿನ್ನಲೆಯಲ್ಲಿ ನಂದಿನಿ ಜಂಬೂ ಪ್ಯಾಕೇಟ್ ಹಾಲಿನ ದರಗಳು ನಾಳೆಯಿಂದ 231ರಿಂದ 234 ರೂಗೆ ಏರಿಕೆಯಾಗಲಿವೆ ಎಂದು ಹೇಳಿದೆ.

ಅಂದಹಾಗೇ ನಂದಿನಿ ಜಂಬೂ ಪ್ಯಾಕೇಟ್ ಹಾಲು 6 ಲೀಟರ್ ಸಾಮರ್ಥ್ಯದ್ದಾಗಿದೆ. ಈ ದರವನ್ನು ನಾಳೆಯಿಂದ ಜಾರಿಗೆ ಬರುವಂತೆ 3 ರೂ ಹೆಚ್ಚಿಸಿದ ಪರಿಣಾಮ 234 ರೂ ಆಗಲಿದೆ.

About The Author

Leave a Reply

Your email address will not be published. Required fields are marked *

<p>You cannot copy content of this page.</p>