ಬೆಂಗಳೂರು: ಸಿಲಿಕಾನ್ ಸಿಟಿ ಜನ ಮೊದಲೇ ಶ್ವಾನ ಪ್ರಿಯರು. ಸಾಕಿದ ನಾಯಿಗಳನ್ನ ಮನೆಯ ಸದಸ್ಯನಂತೆಯೇ ನೋಡಿಕೊಳ್ತಾರೆ. ಒಂದು ಕ್ಷಣವೂ ಅವುಗಳನ್ನ ಬಿಟ್ಟಿರಲಾರದಷ್ಟು ಪ್ರೀತಿ ತೋರಿಸ್ತಾರೆ. ಹಾಗಾಗಿಯೇ ಇಲ್ಲೊಂದು ಕುಟುಂಬ ತಮ್ಮ ಪ್ರೀತಿಯ ಶ್ವಾನವನ್ನು ಕಳೆದುಕೊಂಡು, ಹುಡುಕಿಕೊಡುವಂತೆ ಅಲವತ್ತುಕೊಂಡಿದ್ದಾರೆ.
ಕಳೆದ ಡಿಸೆಂಬರ್ 7ರ ಬೆಳಗ್ಗಿನ ಜಾವ ಅರುಣ್ ಹಾಗೂ ಡೀನಾ ದಂಪತಿ `ಲುಕಾ’ ಹೆಸರಿನ ತಮ್ಮ ಮುದ್ದಿನ ಶ್ವಾನವನ್ನು ಕಳೆದುಕೊಂಡಿದ್ದಾರೆ. ಅಂದು ಬೆಳಗ್ಗೆ ವಾಕಿಂಗ್‌ಗೆ ಹೋಗಿದ್ದಾಗ ಬೀದಿಯಲ್ಲಿ ಓಡಿಹೋದ ಶ್ವಾನ ಮನೆಗೆ ಹಿಂದಿರುಗಲೇ ಇಲ್ಲ. ಶ್ವಾನ ಕಳೆದುಕೊಂಡು ಒಂದು ತಿಂಗಳಾದ್ರೂ ಸಿಕ್ಕಿಲ್ಲ. ಇಡೀ OMRB ಬಡಾವಣೆ ಹುಡುಕಾಡಿದ್ರೂ ಕಳೆದುಹೋದ ಶ್ವಾನದ ಸುಳಿವು ಮಾತ್ರ ಸಿಕ್ಕಿಲ್ಲ. ಹೀಗಾಗಿ ಮುದ್ದಿನ ಶ್ವಾನ ಕಳೆದುಕೊಂಡು ಮನೆಮಂದಿಯೆಲ್ಲಾ ಕಣ್ಣೀರಿಡುತ್ತಿದ್ದಾರೆ.
ಪೊಲೀಸ್ ಠಾಣೆಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ತಾವೇ ಹುಟುಕಾಟಕ್ಕೆ ಮುಂದಾಗಿದ್ದಾರೆ. ಇದೀಗ ತಮ್ಮ ಮುದ್ದಿನ ಶ್ವಾನ ಹುಡುಕಿಕೊಟ್ಟವರಿಗೆ 10 ಸಾವಿರ ರೂ. ಬಹುಮಾನ ನೀಡೋದಾಗಿ ಘೋಷಿಸಿದೆ. ಸದ್ಯ ತಮ್ಮ ಪ್ರೀತಿಯ ಶ್ವಾನ ಮತ್ತೆ ಮನೆಗೆ ಮರಳಿ ಬರಲಿ ಅಂತಾ ಆ ಕುಟುಂಬ ಕಾದುಕುಳಿತಿದೆ. ಮನೆಯಿಂದ ತಪ್ಪಿಸಿಕೊಂಡ ಲೂಕಾ, ಮತ್ತೆ ಮನೆಯವರ ಮಡಿಲು ಸೇರುತ್ತಾ ಅನ್ನೋದನ್ನ ಕಾದುನೋಡಬೇಕಿದೆ.