ಲಕ್ನೋ: ವ್ಯಕ್ತಿಯೊಬ್ಬ ಒಂದೇ ರಾತ್ರಿಯಲ್ಲಿ ಎರಡು ಬಾರಿ ಸಂಭೋಗಿಸಲು ನಿರಾಕರಿಸಿದ್ದಕ್ಕೆ ತನ್ನ ಪತ್ನಿಯನ್ನೇ ಕೊಲೆಗೈದಿರುವ ಘಟನೆ ಉತ್ತರಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ.
ಒಂದೇ ರಾತ್ರಿಯಲ್ಲಿ ಎರಡು ಬಾರಿ ಸಂಭೋಗಿಸುವ ತನ್ನ ಬೇಡಿಕೆಯನ್ನು ನಿರಾಕರಿಸಿದ್ದರಿಂದ ಕೋಪಗೊಂಡ ಪತಿ, ತನ್ನ 30 ವರ್ಷದ ಪತ್ನಿಯ ಕತ್ತಿಗೆ ಹಗ್ಗ ಬಿಗಿದು, ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಕೊಲೆ ಆರೋಪಿಯನ್ನು ಮೊಹಮ್ಮದ್ ಅನ್ವರ್ (34) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ನಂತರ ಆಕೆಯ ಶವವನ್ನು ಮನೆಯಿಂದ 50 ಕಿಮೀ ದೂರದಲ್ಲಿ ಎಸೆದು ನಂತರ ಪರಾರಿಯಾಗಿದ್ದಾನೆ. ಮಂಗಳವಾರ ಪೊಲೀಸರು ಶವವನ್ನು ಪತ್ತೆಹಚ್ಚಿದ್ದಾರೆ. ನಂತರ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಮದುವೆಯಾಗಿ 9 ವರ್ಷ ಕಳೆದಿರುವ ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಅನ್ವರ್ ಅಮ್ರೋಹಾದಲ್ಲಿ ಸ್ವಂತ ಬೇಕರಿಯಿಟ್ಟುಕೊಂಡು ದುಡಿಯುತ್ತಿದ್ದರು.