June 1, 2025 12:08:17 PM
WhatsApp Image 2023-08-09 at 9.22.40 AM

ಬೆಳ್ತಂಗಡಿ: ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಡಾಕ್ಟರ್‌ ಇಲ್ಲದ ವೇಳೆ ನರ್ಸ್ ಇಂಜೆಕ್ಷನ್ ನೀಡಿದ ಬಳಿಕ ಮಗು ಸಾವನ್ನಪ್ಪಿದ ಪ್ರಕರಣ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಧರ್ಮಸ್ಥಳ ಗ್ರಾಮದ ಮುಳಿಕಾರ್ ನಿವಾಸಿ ಬಾಲಕೃಷ್ಣ ಮತ್ತು ಸವಿತಾ ದಂಪತಿಯ 1.5 ತಿಂಗಳ ಹೆಣ್ಣು ಮಗು ಅಂಶಿಕಾಳನ್ನು ಕಫ ಸಮಸ್ಯೆ ಕಾರಣಕ್ಕೆ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಡಾಕ್ಟರ್ ಇಲ್ಲದ ಕಾರಣ ನರ್ಸ್ ಇಂಜೆಕ್ಷನ್ ನೀಡಿದ್ದು, ಬಳಿಕ ಮಗು ಸಾವನ್ನಪ್ಪಿದೆ ಎಂದು ಮನೆಮಂದಿ ಆರೋಪಿಸಿದ್ದಾರೆ. ಘಟನೆಯ ಮಾಹಿತಿ ಅರಿತ ಮಾಜಿ ಶಾಸಕ ವಸಂತ ಬಂಗೇರ ಆಸ್ಪತ್ರೆಗೆ ದೌಡಾಯಿಸಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ತರಾಟೆ ತೆಗೆದುಕೊಂಡಿದ್ದು, ಮಗುವಿನ ತಂದೆಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿಲು ಸಲಹೆ ನೀಡಿದ್ದಾರೆ.

About The Author

Leave a Reply

Your email address will not be published. Required fields are marked *

<p>You cannot copy content of this page.</p>