

ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ 5 ಗ್ಯಾರಂಟಿಗಳ ಭರವಸೆಯ ಆಧಾರದಲ್ಲಿ ಚುನಾವಣಾ ಎದುರಿಸಿದ್ದ ಕಾಂಗ್ರೆಸ್ 135 ಕ್ಷೇತ್ರಗಳನ್ನು ಗೆದ್ದುಕೊಂಡು ಸರಕಾರ ರಚನೆ ಮಾಡಿದೆ.
ಇದೀಗ ಕರ್ನಾಟಕದ ರಾಜಕೀಯ ಭವಿಷ್ಯದ ಕುರಿತು ಖ್ಯಾತ ಜ್ಯೋತಿಷಿ ಅನಿರುದ್ ಮಿಶ್ರ ಭವಿಷ್ಯ ನುಡಿದಿದ್ದಾರೆ. ಅನಿರುದ್ ಮಿಶ್ರ ಹಿಂದೆ 2017ರಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಬಗ್ಗೆ ಭವಿಷ್ಯ ನುಡಿದಿದ್ದು, ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಇನ್ನೂ ಎರಡು ವರ್ಷ ಮೂರು ತಿಂಗಳಲ್ಲಿ ಪ್ರಾರಂಭವಾಗಲಿದೆ ಎಂದಿದ್ದರು. ಅದರಂತೆ 2019 ರ ನವಂಬರ್ 9 ರಂದು ಸುಪ್ರೀಂ ಕೋರ್ಟ್ ನಿಂದ ಮಹತ್ವದ ತೀರ್ಪು ದೊರೆತಿದ್ದು, 2020 ಆಗಸ್ಟ್ ನಿಂದ ಶ್ರೀರಾಮ ಮಂದಿರ ನಿರ್ಮಾಣದ ಕಾರ್ಯ ಆರಂಭಗೊಂಡಿದೆ.
ಇದೀಗ ಕರ್ನಾಟಕ ರಾಜಕೀಯದ ಕುರಿತು ಭವಿಷ್ಯ ನುಡಿದಿದ್ದು, ಇನ್ನೆರಡು ವರ್ಷಗಳಲ್ಲಿ ಕಾಂಗ್ರೆಸ್ ಇಬ್ಬಾಗವಾಗಿ ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರಕಾರವೇ ಬರಲಿದೆ. ಕಾಂಗ್ರೆಸ್ ಶಾಸಕರಲ್ಲಿ ಎರಡು ಬಣಗಳಾಗಿ ಒಂದು ಬಣ ಬಿಜೆಪಿ ಜೆಡಿಎಸ್ ಮೈತ್ರಿ ಅನ್ನು ಸೇರಿಕೊಂಡು ಈಗಿರುವ ಸರಕಾರವನ್ನು ಕೆಡುವುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.