ಭಾರತದ ಮೊದಲ ತೃತೀಯಲಿಂಗಿ ದಂಪತಿಯ ಮಗುವಿಗೆ ನಾಮಕರಣ! ಹೆಸರೇನು ಗೊತ್ತಾ?

ಕೇರಳ: ತೃತೀಯಲಿಂಗಿ ದಂಪತಿಯ ಪುರುಷ ಸಂಗಾತಿಯು ದೇಶದಲ್ಲಿ ಮೊದಲ ಬಾರಿಗೆ ಮಗುವಿಗೆ ಜನ್ಮ ನೀಡಲಿದ್ದಾರೆ. ಈ ತೃತೀಯಲಿಂಗಿ ದಂಪತಿ ತಮ್ಮ ಮಗುವಿಗೆ ನಾಮಕರಣ ಮಾಡುವ ಮೂಲಕವಾಗಿ ಮತ್ತೆ ಸುದ್ದಿಯಲ್ಲಿದ್ದಾರೆ.

ಕೇರಳದ ಕೋಝಿಕ್ಕೋಡ್ನ ಉಮ್ಮಲತ್ತೂರ್ನ ತೃತೀಯಲಿಂಗಿ ದಂಪತಿ ಜಿಯಾ ಮತ್ತು ಜಹ್ಹಾದ್ ಮಗುವಿಗೆ ಜನ್ಮ ನೀಡಿದ್ದು ಇದೀಗ ದಂಪತಿ ಮಗುವಿಗೆ ನಾಮಕರಣ ಮಾಡಿದ್ದಾರೆ.

ಬುಧವಾರ ಸಂಜೆ ಕೋಝಿಕ್ಕೋಡ್ ಜಿಲ್ಲೆಯ ತೆರೆದ ಸ್ಥಳದಲ್ಲಿ ನಡೆದ ಈ ಸಮಾರಂಭದಲ್ಲಿ ಮಗುವಿಗೆ ಜಬಿಯಾ ಜಹದ್ ಎಂದು ನಾಮಕರಣ ಮಾಡಲಾಗಿದೆ. ಈ ಸಂಭ್ರಮದಲ್ಲಿ ಹಲವಾರು ಟ್ರಾನ್ಸ್‌ಜೆಂಡರ್ ಸಮುದಾಯದ ವ್ಯಕ್ತಿಗಳು, ಕುಟುಂಬಸ್ಥರು, ಹಿತೈಷಿಗಳು ಭಾಗವಹಿಸಿದ್ದರು.

ಹೆಣ್ಣಾಗಿ ಹುಟ್ಟಿ ಗಂಡಾಗಿ ಬದಲಾದ ಜಹ್ಹಾದ್ ಮತ್ತು ಗಂಡಾಗಿ ಹುಟ್ಟಿ ಹೆಣ್ಣಾಗಿ ಬದಲಾದ ಜಿಯಾ ಮಗು ಹುಟ್ಟಿದ ಸುವರ್ಣ ಸಮಯವನ್ನು ಸಂಭ್ರಮಿಸಿದ್ದು ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಜಹ್ಹಾದ್ ಗೆ ಕಳೆದ ಫೆಬ್ರವರಿ 2ರಂದು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿತ್ತು.  ಮಗುವಿಗೆ ಜನ್ಮ ನೀಡಿದ ಭಾರತದ ಮೊದಲ ತೃತೀಯಲಿಂಗಿ ಜಹ್ಹಾದ್ ಅವರು ಹಾಲಿನ ಬ್ಯಾಂಕ್ ಮೂಲಕ ಮಗುವಿಗೆ ಹಾಲುಣಿಸಲು ದಂಪತಿ ನಿರ್ಧರಿಸಿದ್ದಾರೆ. ಅಂದು ಮಗುವಿನ ಲಿಂಗ ಗುರುತನ್ನು ಬಹಿರಂಗಪಡಿಸಲು ನಿರಾಕರಿಸಿದ್ದ ದಂಪತಿ ಇದೀಗ ಮಗುವಿಗೆ ಜಬಿಯಾ ಜಹದ್ ಎಂದು ನಾಮಕರಣ ಮಾಡಿದ್ದಾರೆ. ಈ ಹೆಸರಿನ ಮೂಲಕ ಮಗು ಹೆಣ್ಣು ಎಂದು ಗುರುತಿಸಲಾಗಿದೆ

Check Also

ರುಚಿಕರವಾದ ಮಟನ್​ ಬಿರಿಯಾನಿ ಮಾಡುವ ವಿಧಾನ

ಬೇಕಾಗುವ ಸಾಮಗ್ರಿ : ಮಟನ್​​ 500 ಗ್ರಾಂ, 2 ಕಪ್​ ಅಕ್ಕಿ, 2 ಲವಂಗ, 2 ದಾಲ್ಚಿನ್ನಿ ಎಲೆ, ಹಸಿ …

Leave a Reply

Your email address will not be published. Required fields are marked *

You cannot copy content of this page.