ಗುಜರಾತ್‌ನಲ್ಲಿ ಭರ್ಜರಿ ಬಿಜೆಪಿ ಗೆಲುವು : ದೇಶಾದ್ಯಂತ ಕಾರ್ಯಕರ್ತರಿಂದ ಸಿಹಿ ಹಂಚಿ, ಸಂಭ್ರಮಾಚರಣೆ

ಬೆಂಗಳೂರು : ಗುಜರಾತ್ ವಿಧಾನಸಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು, ಈಗಾಗಲೇ ಗುಜರಾತ್ ನಲ್ಲಿ 154 ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದೆ. ಈ ಬೆನ್ನಲ್ಲೇ ದೇಶಾದ್ಯಂತ ಸಂಭ್ರಮಾಚರಣೆ ಶುರುವಾಗಿದೆ .

ರಾಜ್ಯದ ಹಲವೆಡೆ ಬಿಜೆಪಿ ಕಾರ್ಯಕರ್ತರಿಂದ ಬಿಜೆಪಿ ಗೆಲುವಿಗೆ ಸಂಭ್ರಮದಲ್ಲಿ ತೊಡಗಿದ್ದು ಸಿಹಿ ತಿಂಡಿಗಳನ್ನು ಹಂಚಿ ಪಟಾಕಿ ಹಚ್ಚುವ ಮೂಲಕ ಸಂಭ್ರಮಾಚರಣೆ ಮಾಡಲಾಗುತ್ತಿದೆ

ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದ್ದು, ಈಗಾಗಲೇ ಬಿಜೆಪಿ 150 ಕ್ಕು ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಹೀಗಾಗಿ ಭೂಪೇಂದ್ರ ಪಟೇಲ್ ಗೆ ಮುಖ್ಯಮಂತ್ರಿ ಪಟ್ಟ ಫಿಕ್ಸ್ ಆಗಿದ್ದು, ಡಿಸೆಂಬರ್ 11 ಅಥವಾ 12 ರಂದು ಪದಗ್ರಹಣ ನಡೆಯುವ ಸಾಧ್ಯತೆ ಇದೆ.

ಇನ್ನು ಗುಜರಾತ್ ವಿಧಾನಸಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು, ಈಗಾಗಲೇ ಬಿಜೆಪಿ 154 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಕೇವಲ 19 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

Check Also

ರುಚಿಕರವಾದ ಮಟನ್​ ಬಿರಿಯಾನಿ ಮಾಡುವ ವಿಧಾನ

ಬೇಕಾಗುವ ಸಾಮಗ್ರಿ : ಮಟನ್​​ 500 ಗ್ರಾಂ, 2 ಕಪ್​ ಅಕ್ಕಿ, 2 ಲವಂಗ, 2 ದಾಲ್ಚಿನ್ನಿ ಎಲೆ, ಹಸಿ …

Leave a Reply

Your email address will not be published. Required fields are marked *

You cannot copy content of this page.