December 26, 2024
WhatsApp Image 2023-07-08 at 2.41.42 PM

ವದೆಹಲಿ: ಪಬ್‌ ಜೀ ಗೇಮ್‌ ನಿಂದ ಯುವಕನೊಬ್ಬನ ಪರಿಚಯವಾಗಿ,ಆತನನ್ನು ಭೇಟಿಯಾಗಲು ಪಾಕ್‌ ನಿಂದ ನೇಪಾಳ ಮೂಲಕವಾಗಿ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಮಹಿಳೆಯ ಸ್ಟೋರಿ ಇತ್ತೀಚೆಗೆ ವೈರಲ್‌ ಆಗಿತ್ತು. ಇದೀಗ ಆ ಮಹಿಳೆಯ ಪತಿ ಮರಳಿ ಪಾಕ್‌ ಗೆ ಬಾ ಎಂದು ಪತ್ನಿಯನ್ನು ವಿನಂತಿಸಿರುವ ವಿಡಿಯೋ ಕೂಡ ವೈರಲ್‌ ಆಗಿದೆ.

ಘಟನೆ ಹಿನ್ನೆಲೆ: ಗ್ರೇಟರ್‌ ನೋಯ್ಡಾ ಮೂಲದ ನಿವಾಸಿಯಾಗಿರುವ ಸಚಿನ್‌ ಜನಪ್ರಿಯ ಮೊಬೈಲ್‌ ಗೇಮ್‌ ಪಬ್‌ ಜೀ ಆಡುತ್ತಾ ಆಡುತ್ತಾ ಅದರ ಮೂಲಕವೇ ಒಬ್ಬ ಮಹಿಳೆಗೆ ಮೆಸೇಜ್‌ ಮಾಡಿ ಆಕೆಯನ್ನೇ ಪ್ರೀತಿಸಲು ತೊಡಗಿದ್ದಾರೆ. ಆ ಮಹಿಳೆಗೆ ಈಗಾಗಲೇ ನಾಲ್ಕು ಮಕ್ಕಳಿದ್ದು, ಆಕೆ ಪಾಕಿಸ್ತಾನ ಮೂಲದವಳು ಆಗಿದ್ದಾಳೆ ಎನ್ನುವುದು ಅರಿತುಕೊಂಡಿದ್ದರೂ ಆಕೆಯೊಂದಿಗೆ ನಿರಂತರವಾಗಿ ಚಾಟಿಂಗ್‌ ಮಾಡತೊಡಗಿದ್ದಾರೆ. ಹಲವು ಸಮಯದಿಂದ ಪಬ್‌ ಜೀ ಗೇಮ್‌ ಆಡುತ್ತಾ ಮೆಸೇಜ್‌ ಮಾಡಿದ ಸಚಿನ್‌ ಗೆ ಪಾಕ್‌ ಮೂಲದ ನಾಲ್ಕು ಮಕ್ಕಳ ತಾಯಿ ಸೀಮಾ ಗುಲಾಮ್ ಹೈದರ್ ಯೊಂದಿಗೆ ಪ್ರೇಮಾಂಕುರ ಆಗಿದೆ. ಅತ್ತ ಕಡೆಯಿಂದ ಸೀಮಾ ಕೂಡ ಸಚಿನ್‌ ನನ್ನು ಪ್ರೀತಿಸ ತೊಡಗಿದ್ದಾರೆ. ಇದಾದ ಬಳಿಕ ಸೀಮಾ ತನ್ನ ನಾಲ್ಕು ಮಕ್ಕಳೊಂದಿಗೆ ಅಕ್ರಮವಾಗಿ ನೇಪಾಳದ ಮೂಲಕ ಭಾರತಕ್ಕೆ ಬಂದು ಸಚಿನ್‌ ಇರುವ ಗ್ರೇಟರ್‌ ನೋಯ್ಡಾಕ್ಕೆ ಬಂದಿದ್ದಾರೆ.

ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಇದೀಗ ಸೀಮಾ ಅವರ ಪತಿ ಗುಲಾಮ್ ಹೈದರ್ ಸೌದಿ ಅರೇಬಿಯಾದಿಂದ ವಿಡಿಯೋವೊಂದನ್ನು ಮಾಡಿ ಪತ್ನಿಯನ್ನು ಪಾಕ್‌ ಗೆ ಕಳುಹಿಸುವಂತೆ ವಿನಂತಿಸಿದ್ದಾರೆ.

“ಮೋದಿ ಸರ್ಕಾರವನ್ನು ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ. ನನ್ನ ಪತ್ನಿ ಹಾಗೂ ಮಕ್ಕಳನ್ನು ಭಾರತಕ್ಕೆ ಕಳುಹಿಸಿಕೊಡಿ. ನನ್ನ ಮಕ್ಕಳು ಎಲ್ಲಿದ್ದಾರೆ ಎಂದು ನನಗೆ ಗೊತ್ತಾಗುತ್ತಿರಲಿಲ್ಲ. ನನ್ನ ಮಕ್ಕಳ ಬಗ್ಗೆ ಮಾಹಿತಿ ಕೊಟ್ಟ ಭಾರತೀಯ ಮಾಧ್ಯಮಗಳೊಂದಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನಾನೊಬ್ಬ ಬಡ ವ್ಯಕ್ತಿ. ನನ್ನ ಮಕ್ಕಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಅವರನ್ನು ದಯವಿಟ್ಟು ಪಾಕಿಸ್ತಾನಕ್ಕೆ ಕಳುಹಿಸಿಕೊಡಿ” ಎಂದು ವಿಡಿಯೋ ಮಾಡಿ ವಿನಂತಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.