

ಆ ಮಹಿಳೆ ನಾನೇ ನಿನ್ನ ತಾಯಿ ಅಂದ್ರೂ, ಬಾಲಕ ಸುತರಾಂ ಒಪ್ಪುತ್ತಿಲ್ಲ, ಜೋರಾಗಿ ಅಳುತ್ತಾ ನೀನಲ್ಲ ಎಂದು ತಲೆಯಾಡಿಸಿ ತೋರಿಸುತ್ತಾ, ಆತ ತನ್ನ ಅಮ್ಮ ಎಲ್ಲಿ ಎಂದು ಹುಡುಕುತ್ತಿದ್ದಾನೆ.
ಇಂತಹದ್ದೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನ ಈ ವಿಡಿಯೋ ಕಂಡು ಬಿದ್ದುಬಿದ್ದು ನಗುತ್ತಿದ್ದಾರೆ.ಹೌದು..! ಪುರುಷರು ಮಹಿಳೆಯರ ಮೇಕಪ್ ಬಗ್ಗೆ ಕಾಮೆಂಟ್ ಮಾಡುವುದು ಕಾಲೆಳೆಯುವುದು ಸಾಮಾನ್ಯ, ಆದ್ರೆ ಈ ವಿಡಿಯೋ ಅಂತೂ ಮೇಕಪ್ ವಿರೋಧಿ ಪುರುಷರ ಬಾಯಿಗೆ ಆಹಾರವಾಗಿದೆ.
ಮಹಿಳೆಯೊಬ್ಬರು ತಾವು ಮೇಕಪ್ ಮಾಡಿಕೊಂಡ ಬಳಿಕ ತನ್ನ ಮಗನ ಬಳಿಗೆ ಬಂದಿದ್ದಾರೆ. ಆಗ ಆತನಿಗೆ ತನ್ನ ತಾಯಿಯ ಪರಿಚಯ ಸಿಕ್ಕಿಲ್ಲ. ಆ ಬಾಲಕ ಇದ್ಯಾರು ಮಹಿಳೆ ಎಂದು ತಿಳಿಯದೇ ಜೋರಾಗಿ ಅಳುತ್ತಾ, ತನ್ನ ತಾಯಿಯನ್ನು ಹುಡುಕಾಡುತ್ತಿದ್ದಾನೆ.
https://twitter.com/HasnaZarooriHai/status/1666029260362874881?ref_src=twsrc%5Etfw%7Ctwcamp%5Etweetembed%7Ctwterm%5E1666029260362874881%7Ctwgr%5E9103e0f9869d96a0a15f6a0968059b8670338466%7Ctwcon%5Es1_&ref_url=https%3A%2F%2Fwww.mahanayaka.in%2Fboy-screamed-loudly-unable-to-recognize-his-mother%2F