March 9, 2026
WhatsApp Image 2026-03-08 at 2.13.52 PM (1)

ಉಡುಪಿ : ಅಲೆವೂರು, ಬೆಳ್ಳೆ, ಕುಂತಳನಗರ ವ್ಯಾಪ್ತಿಯಲ್ಲಿ ಮಕ್ಕಳ ಕಳ್ಳರಿದ್ದಾರೆಂಬುದಾಗಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.

ಮಕ್ಕಳ ಕಳ್ಳರು ಮುಸುಕು ಹಾಕಿಕೊಂಡು ಅಲೆವೂರು, ಬೆಳ್ಳೆ, ಕುಂತಳನಗರ ವ್ಯಾಪ್ತಿಯಲ್ಲಿ ತಿರುಗುತ್ತಿದ್ದಾರೆ. ದಯವಿಟ್ಟು ಮಕ್ಕಳು ಬೆಳಗ್ಗೆ ರಿಕ್ಷಾ ಹತ್ತುವಾಗ ಮತ್ತು ಸಾಯಂಕಾಲ ಇಳಿಯುವಾಗ ಪೋಷಕರು ಕಡ್ಡಾಯವಾಗಿ ಇರಲೇ ಬೇಕು. ಮಕ್ಕಳನ್ನು ಜೋಪಾನವಾಗಿ ಕಾಪಾಡಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದು ಸುಳ್ಳು ಸುದ್ದಿ. ಇಂತಹ ಸಂದೇಶಗಳನ್ನು ಯಾರಾದರೂ ಹರಡುತ್ತಿರುವುದು ಗಮನಕ್ಕೆ ಬಂದರೆ ನಮಗೆ ತಿಳಿಸಿ. ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಪ್ರಕರಣ ದಾಖಲಿಸಲಾಗುವುದು’ ಎಂದು ಎಸ್ಪಿ ಹರಿರಾಂ ಶಂಕರ್ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.