ಕಲಬುರಗಿ : ವ್ಯಕ್ತಿಯ ಮೇಲೆ ಪೊಲೀಸ್ ಪಿಎಸ್‌ಐ ಫೈಯರ್ ಪ್ರಕರಣದಲ್ಲಿ ಕಾಲಿಗೆ ಗುಂಡು ತಗುಲಿದ್ದ ವ್ಯಕ್ತಿಯ ಕಾಲನ್ನು ವೈದ್ಯರು ತುಂಡಾರಿಸಿದ ಘಟನೆ ಬೆಳಕಿಗೆ ಬಂದಿದೆ.
ನಗರದ ಸೂಪರ್ ಮಾರ್ಕೆಟ್‌ನಲ್ಲಿ ಪೋಲಿಸರ ಮೇಲೆ ಮೊಹಮ್ಮದ್ ಫಜಲ್ ತಲ್ವಾರ್ ಹಿಡಿದು ಹಲ್ಲೆಗೆ ಮುಂದಾಗಿದ್ದ ವ್ಯಕ್ತಿಯ ಕಾಲಿಗೆ ಪಿಎಸ್‌ಐ ವಾಹಿದ್ ಕೋತ್ವಾಲ್ ಗುಂಡು ಹೊಡೆದಿದ್ದರು. ವಾಹಿದ್ ಕೋತ್ವಾಲ್ ಚೌಕ್ ಪೊಲೀಸ್ ಠಾಣೆ ಪಿಎಸ್‌ಐ ಎಂದು ಗುರುತಿಸಲಾಗಿದೆ.
ಗುಂಡು ತಗಲಿದ್ದರಿಂದ ಫಜಲ್ ಕಾಲು ತುಂಬಾ ಡ್ಯಾಮೇಜ್ ಆಗಿತ್ತು. ಇನ್ನೂ ಹೆಚ್ಚು ತೊಂದರೆ ಸಾಧ್ಯತೆ ಹಿನ್ನೆಲೆ ಆತನ ಕಾಲನ್ನು ವೈದ್ಯರು ತುಂಡು ಮಾಡಿದ್ದಾರೆ. ಯುನೈಟೆಡ್ ಆಸ್ಪತ್ರೆಯ ವೈದ್ಯರು ಆತನ ಬಲಗಾಲನ್ನು ಕಟ್ ಮಾಡಿದ್ದು, ಚಿಕಿತ್ಸೆ ಮುಂದುವರೆದಿದೆ. ರವಿವಾರ ರಾತ್ರಿ 9 ಗಂಟೆ ಸುಮಾರಿಗೆ ನಡೆದಿದ್ದ ಫೈರಿಂಗ್ ಎಂದೆನ್ನಲಾಗಿದೆ