ಸಲಿಂಗಿ ದಂಪತಿ ಜಿಯಾ ಪಾವಲ್ ಮತ್ತು ಜಿಹಾದ್ ಅವರಿಗೆ ಗಂಡು ಮಗುವಾಗಿದೆ. ಹೆರಿಗೆ ನಂತರ ತಾಯಿ ಹಾಗೂ ಮಗು ಚೆನ್ನಾಗಿದ್ದಾರೆ ಎಂದು ಅವರ ಸ್ನೇಹಿತ ಆಡಮ್ ಹ್ಯಾರಿ ಫೇಸ್ ಬುಕ್ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ, ಅವರ ಸ್ನೇಹಿತರು ಮಗುವನ್ನು ನೋಡಲು ಕಾತುರತೆಯಿಂದ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.
ಇನ್ನು ಈ ಕುರಿತು ಆಡಮ್ ಸೋಷಿಯಲ್ ಮೀಡಿಯಾ ಖಾತೆಯಲ್ಲಿ, ಜಿಯಾ ಉತ್ಸಾಹದಿಂದ ಹೊರಗೆ ಕಾಯುತ್ತಿದ್ದಾನೆ, ನನ್ನ ಜೀವನದಲ್ಲಿ ನಾನು ಎಂದಿಗೂ ಸಂತೋಷವನ್ನು ಅನುಭವಿಸಿಲ್ಲ ಮಗು ಗಂಡೋ ಅಥವಾ ಹುಡುಗಿಯೋ ಎಂದು ಕೇಳುವವರಿಗೆ ಮಗು ಬೆಳೆದಾಗ ಹೇಳಲಾಗುವುದು ಎಂದು ಶೀರ್ಷಿಕೆ ಬರೆದು ಫೋಟೋಸ್ ಹಂಚಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಜಿಹಾದ್ ಗರ್ಭಧಾರಣೆಯ ಮೂಲಕ ಭಾರತದ ಮೊದಲ ಟ್ರಾನ್ಸ್ಮ್ಯಾನ್ ತಂದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ತೃತೀಯಲಿಂಗಿಗಳಾಗಿರುವುದರಿಂದ ಇಬ್ಬರೂ ಕಾನೂನು ಪ್ರಕ್ರಿಯೆಯಲ್ಲಿ ಸಿಲುಕಿದ್ದರಿಂದ ಮಗುವನ್ನು ದತ್ತು ಪಡೆಯುವ ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದರು. ನಂತರ ಸ್ವತಃ ತಾವೇ ಜನ್ಮ ನೀಡುವ ಆಲೋಚನೆಗೆ ಬಂದಿದ್ದರು. ವೈದ್ಯರ ನೇತೃತ್ವದಲ್ಲಿ ಪರೀಕ್ಷೆ ನಡೆಸಿದ ಬಳಿಕ ಜಿಹಾದ್ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದು ದೃಢಪಟ್ಟಿದ್ದು, ಚಿಕಿತ್ಸೆ ಆರಂಭಿಸಲಾಗಿದೆ. ಕೊನೆಗೂ ಇಬ್ಬರ ಕನಸು ನನಸಾಯಿತು.