ಉಡುಪಿ : ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆಯೊಂದು ಭಾಗಶಃ ಸುಟ್ಟುಹೋಗಿರುವ ಘಟನೆ ಉಡುಪಿ ಜಿಲ್ಲೆಯ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಟಕಲ್ಲುವಿನ ಕೋಡುಗುಡ್ಡೆ ಎಂಬಲ್ಲಿ ನಡೆದಿದೆ.
ಇಲ್ಲಿನ ಕೋಡುಗುಡ್ಡೆ ನಿವಾಸಿಯಾಗಿರುವ ಲೀನಾ ಕುಟ್ಹಿನೋ ಎಂಬವರ ವಾಸದ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆ ಭಾಗಶಃ ಸುಟ್ಟುಹೋಗಿದೆ. ನಿನ್ನೆ ಸಂಜೆ ಸುಮಾರು 5 ಗಂಟೆಯ ವೇಳೆ ಅವಘಡ ಸಂಭವಿಸಿದೆ. ಬಚ್ಚಲು ಮನೆಯಲ್ಲಿ ಉರಿಯುತ್ತಿದ್ದ ಬೆಂಕಿ ಅಕಸ್ಮಿಕವಾಗಿ ಮನೆಯ ಒಂದು ಪಾಶ್ವದ ಹಂಚು ಚಾವಣಿಗೆ ತಗಲಿದ ಪರಿಣಾಮ ಮನೆಯ ಒಂದು ಪಾಶ್ವದಲ್ಲಿದ್ದ ಹಂಚು ಚಾವಣಿ ಹಾಗೂ ಮೇಲಿನ ಮರದ ಮುಚ್ಚಿಗೆ ಸಂಪೂರ್ಣ ಸುಟ್ಟುಹೋಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕದಳದ ಸಿಬ್ಬಂದಿಗಳು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.