ಮಂಗಳೂರು : ಅನೈತಿಕ ಪೊಲೀಸ್ ಗಿರಿ ಕೇಸ್ : ಖಡಕ್ ವಾನ್೯ ಕೊಟ್ಟ ಕಮಿಷನರ್

ಮಂಗಳೂರು : ಅನೈತಿಕ ಪೊಲೀಸ್‌ಗಿರಿ ಕೃತ್ಯಗಳಿಗೆ ಯಾರು ಮುಂದಾಗುತ್ತಾರೆ ಮತ್ತು ಅವರಿಗೆ ಬೆನ್ನ ಹಿಂದೆಯಿಂದ ಯಾರೂ ಬೆಂಬಲ ನೀಡುತ್ತಾರೆಯೋ ಅವರ ಬಗ್ಗೆ ತುರ್ತಾಗಿ ಕಾನೂನಿನಡಿ ಕೈಗೊಳ್ಳಬಹುದಾದ ಕ್ರಮಗಳನ್ನು ವಹಿಸಲಾಗುವುದು. ಸಾಮಾನ್ಯವಾಗಿ ಇಂತಹ ಕೃತ್ಯಗಳು ನಡೆದಾಗ ತಡವಾಗಿ ಕ್ರಮವಹಿಸಲು ಮುಂದಾದಾಗ ಅವರಿಗೆ ಪ್ರೋತ್ಸಾಹ ದೊರಕಿದಂತಾಗುತ್ತದೆ. ಅದಕ್ಕೆ ಅವಕಾಶ ನೀಡದೆ ಕ್ರಮ ವಹಿಸಲಾಗುವುದು ಎಂದು ನೂತನ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿದ್ದಾರೆ. ರಾಜ್ಯದಲ್ಲಿಯೇ ಮಂಗಳೂರು ಅತ್ಯಂತ ಮಹತ್ವ ಹಾಗೂ ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿದೆ. ಹಾಗಾಗಿ ಇಲ್ಲಿ ಕೆಲಸ ಮಾಡುವಾಗ ನಮ್ಮ ಹೆಚ್ಚುವರಿ ಪ್ರಯತ್ನವನ್ನು ಹಾಕಬೇಕಾಗುತ್ತದೆ. ನನಗೆ ಈಗ ಇಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಬೀಟ್ ವ್ಯವಸ್ಥೆಯೊಂದಿಗೆ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲಾಗುವುದು ಎಂದಿದ್ದಾರೆ.

Check Also

ಕಾರವಾರ: ಮಳೆಗೆ ಗುಡ್ಡ ಕುಸಿದು ʻಕಾರವಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ‌ʼ ಬಂದ್ : ವಾಹನ ಸವಾರರ ಪರದಾಟ

ಕಾರವಾರ : ರಾಜ್ಯಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು, ಭಾರೀ ಮಳೆಯಿಂದಾಗಿ ಗುಡ್ಡ ಕುಸಿದ ಪರಿಣಾಮ ಕಾರವಾರ-ಬೆಂಗಳುರು ರಾಷ್ಟ್ರೀಯ ಹೆದ್ದಾರಿ ಸಂಚಾರ …

Leave a Reply

Your email address will not be published. Required fields are marked *

You cannot copy content of this page.