
ಸುರತ್ಕಲ್ ಠಾಣಾ ಅಕ್ರ 44/2014 ಕಲಂ120(ಬಿ), 449, 392, 302 ಜೊತೆಗೆ 34 ಐಪಿಸಿ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ಉತ್ತರ ಪ್ರದೇಶ ರಾಜ್ಯ ಅಮರ್ಥ್ ಜಿಲ್ಲೆ ರಾಮ್ ಪುರ್ ತೇಗ, ಮಂದಿನಪುರ, ನಿವಾಸಿ ಶಹನ್ವಾಜ್ @ಶಾನು ಎಂದು ಗುರುತಿಸಲಾಗಿದೆ.
ದಿನಾಂಕ:8.02.2014ರಂದು ಸಂಜೆ 4-00 ಗಂಟೆಯಿಂದ ರಾತ್ರಿ 8-00 ಗಂಟೆ ಮದ್ಯೆ ಕುಳಾಯಿ ಹೊಸಬೆಟ್ಟುವಿನ ಕೋರ್ದಬ್ಬು ‘ಕಲ’ದ ಬಳಿಯ ನಿವಾಸಿ ಸುಮತಿ ಪ್ರಭು ಎಂಬವರನ್ನು ಕುತ್ತಿಗೆಗೆ ಚೂರಿಯಿದ ಕೊಯ್ದು ಕೊಲೆ ಮಾಡಿ ಮೈಮೇಲೆದ್ದ ಸುಮಾರು ರೂ 3,80,000/-ಬೆಲೆ ಬಾಳುವ 192 ಗ್ರಾಂ (24 ಪವನ್) ತೂಕದ ಬಂಗಾರದ ಒಡವೆಗಳನ್ನು ದೋಚಿಕೊಂಡು ಹೋದ ಬಗ್ಗೆ ಕೊಲೆಯಾದ ಸುಮತಿರವರ ಮಗ ಗುರುದಾಸ್ ಪ್ರಭು ಎಂಬುವರು ಠಾಣೆಗೆ ಬಂದು ನೀಡಿದ ದೂರನ್ನು ಸ್ವೀಕರಿಸಿಕೊಂಡು ಠಾಣಾ ಅಕ್ರ 44/2014 ಕಲಂ 120ಬಿ, 449, 392, 302 ಜೊತೆಗೆ 34 ಐಪಿಸಿ ಯಂತೆ ಪ್ರಕರಣನ್ನು ದಾಖಲಿಸಿಕೊಂಡು ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಾದ 1. ಶಿವರಾಮ್, ತಂದೆ: ದೇವಿಸಿಂಗ್, ವಾಸ: ಕಪೂರಮಾಲಕ್, ದತ್ತಕ ಬೇಡ, ಭಯಾನ ತಾಲೂಕು, ಭರತ್ ಪುರ ಜಿಲ್ಲೆ, ರಾಜಸ್ಥಾನ ರಾಜ್ಯ 2. ಬಹುದ್ದೂರ್ ಸಿಂಗ್ @ ಬಹುದುರೆ @ ಬುಯ್ಯ, ತಂದೆ: ಗೋವಿಂದ ಸಿಂಗ್, ವಾಸ: ಕಪೂರಮಾಲಕ್, ದತ್ತಕ ಬೇಡ, ಭಯಾನ ತಾಲೂಕು, ಭರತ್ ಪುರ ಜಿಲ್ಲೆ, ರಾಜಸ್ಥಾನ ರಾಜ್ಯ, 3. ಶಹನ್ವಾಜ್ @ಶಾನು, ತಂದೆ: ಯಹಶಾನ್, ವಾಸ: ರಾಮ್ ಪುರ್ ತೇಗ, ಮಂದಿನಪುರ, ಅಮರ್ಥ್ ಜಿಲ್ಲೆ, ಉತ್ತರ ಪ್ರದೇಶ ರಾಜ್ಯ ಎಂಬವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಪೂರೈಸಿ ದಿನಾಂಕ: 17.07.2014 ರಂದು ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದು ಅದರಂತೆ ಮಾನ್ಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲಿ ಎಸ್.ಸಿ ನಂ 80/2014 & ಸ್ಪ್ಲಿಟ್ ಅಪ್ ಎಸ್.ಸಿ ನಂ 105/2024 , ವಿಚಾರಣೆಯಲ್ಲಿರುತ್ತದೆ, ಪ್ರಕರಣದ ಆರೋಪಿತರು ನ್ಯಾಯಾಲಯದಲ್ಲಿ ಜಾಮೀನು ಪಡೆದುಕೊಂಡ ನಂತರ ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ. ಪ್ರಕರಣದ ಆರೋಪಿಗಳು ಮಾನ್ಯ ನ್ಯಾಯಲಯದಲ್ಲಿ ಜಾಮೀನು ಪಡೆದುಕೊಂಡ ನಂತರ ಮಾನ್ಯ ನ್ಯಾಯಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿರುತ್ತಾರೆ. ನ್ಯಾಯಾಲಯವು ಆರೋಪಿಗಳ ಮೇಲೆ ದಸ್ತಗಿರಿ ವಾರಂಟ್‌ನ್ನು ಹೊರಡಿಸಿರುತ್ತದೆ. ಸುರತ್ಕಲ್ ಠಾಣಾ ಹೆಚ್.ಸಿ 655ನೇ ಅಜಿತ್ ಮ್ಯಾಥ್ಯು ಹೆಚ್.ಸಿ 473ನೇ ರವಿ ಡಿ ಹಾಗೂ ಸಿಪಿಸಿ 2475ನೇ ಸುನೀಲ್ ರವರುಗಳು 1ನೇ ಆರೋಪಿ ಶಿವರಾಮ್, ತಂದೆ: ದೇವಿಸಿಂಗ್, ವಾಸ: ಕಪೂರಮಾಲಕ್, ದತ್ತಕ ಬೇಡ, ಭಯಾನ ತಾಲೂಕು, ಭರತ್ ಪುರ ಜಿಲ್ಲೆ, ರಾಜಸ್ಥಾನ ರಾಜ್ಯ ಎಂಬಾತನನ್ನು ದಿನಾಂಕ 03-03-2025 ರಂದು ರಾಜಸ್ಥಾನದಲ್ಲಿ ದಸ್ತಗಿರಿ ಮಾಡಿ ಮಾನ್ಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಯು ನ್ಯಾಯಾಂಗ ಬಂಧನದಲ್ಲಿ ಇರುವುದಾಗಿದೆ.
ಮಾನ್ಯ ನ್ಯಾಯಾಲಯದ ಸ್ಪ್ಲಿಟ್ ಅಪ್ ಎಸ್.ಸಿ ನಂ 105/2024 ರಲ್ಲಿ ಸುಮಾರು 4 ವರ್ಷಗಳಿಂದ ದಸ್ತಗಿರಿಗೆ ಸಿಗದೇ ಬಾಕಿ ಇದ್ದ ವಾರಂಟ್ ಅಸಾಮಿಗಳಾದ ಬಹದ್ದೂರು ಸಿಂಗ್ ಮತ್ತು ಶಹನಾಜ್ @ ಶಾನು ಎಂಬವರ ಪತ್ತೆಯ ಬಗ್ಗೆ ಠಾಣಾ ಸಿಬ್ಬಂದಿಗಳಾದ ಹೆಚ್.ಸಿ 655ನೇ ಅಜಿತ್ ಮ್ಯಾಥ್ಯು, ಹೆಚ್.ಸಿ 473ನೇ ರವಿ ಡಿ ಹಾಗೂ ಪಿಸಿ 2475ನೇ ಸುನೀಲ್ ಕುಸನಾಳ ರವರುಗಳು ಮಧ್ಯಪ್ರದೇಶ ರಾಜ್ಯದ ಭೋಪಾಲ್ ನಗರದ ಕರಾಡ್ ಎಂಬಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಶಹನಾಜ್ @ ಶಾನು ಎಂಬಾತನ್ನು ದಿನಾಂಕ: 04.08.2025 ರಂದು ಬೆಳಗ್ಗೆ 11:00 ಗಂಟೆಗೆ ದಸ್ತಗಿರಿ ಮಾಡಿ ಭೋಪಾಲ್ ನಗರದ ಮಾನ್ಯ 2ನೇ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಟ್ರಾನ್ಸಿಟ್ ವಾರಂಟ್ ನ್ನು ಪಡೆದುಕೊಂಡು ದಿನಾಂಕ: 06.08.2025 ರಂದು ರಾತ್ರಿ 8:00 ಗಂಟೆಗೆ ಠಾಣೆಗೆ ಕರೆತಂದಿದ್ದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ಆರೋಪಿಯನ್ನು ಪಿ.ಐ ಸುರತ್ಕಲ್ ರವರ ಮಾರ್ಗದರ್ಶನದಲ್ಲಿ ಸುರತ್ಕಲ್ ಠಾಣಾ ಸಿಬ್ಬಂದಿಯವರಾದ ಹೆಚ್.ಸಿ 655ನೇ ಅಜಿತ್ ಮಾಥು, ಹೆಚ್.ಸಿ 473ನೇ ರವಿ ಡಿ ಹಾಗೂ ಸಿಪಿಸಿ 2475ನೇ ಸುನೀಲ್ ಕುಸನಾಳ ರವರು ಶಹನಾಜ್ @ ಶಾನು ಎಂಬಾತನ್ನು ದಸ್ತಗಿರಿ ಮಾಡಿರುತ್ತಾರೆ.
