March 21, 2026
WhatsApp Image 2024-02-07 at 2.16.42 PM

ಸುಳ್ಯ: ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಯ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ.7ರ ಬುಧವಾರ ಬೆಳಿಗ್ಗೆ ಸುಳ್ಯದಲ್ಲಿ ಸಂಭವಿಸಿದೆ.

ಪುತ್ತೂರು ತಿಂಗಳಾಡಿ ನಿವಾಸಿ ವಸಂತ ಎಂಬವರು ಇಂದು ಮುಂಜಾನೆ ಸುಮಾರು 6 ಗಂಟೆಗೆ ಆಸ್ಪತ್ರೆಯ ಕಟ್ಟಡದ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡವರು.

 

ವಸಂತ ಕಳೆದ ಮೂರು ದಿನಗಳ ಹಿಂದೆ ಸುಳ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು, ಇಂದು ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಇವರು ಪಿಟ್ಸ್ ಕಾಯಿಲೆಗೆ ಒಳಗಾಗುತ್ತಿದ್ದರು ಎಂದು ತಿಳಿದುಬಂದಿದೆ.

ಮೃತರು ಪತ್ನಿ, ಒರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ

About The Author

Leave a Reply

Your email address will not be published. Required fields are marked *

You cannot copy content of this page.