ಉಡುಪಿ: ಕರಾವಳಿಯಾದ್ಯಂತ ಮಂಗಳವಾರ ,ಬುಧವಾರ ಮತ್ತು ಗುರುವಾರ ಸುರಿದ ಭಾರೀ ಮಳೆಗೆ ಹಲವು ಮನೆಗಳು ಜಲಾವೃತಗೊಂಡಿವೆ. ರಾತ್ರಿಯಿಡೀ ಮಳೆಯಾದ ಕಾರಣ ಉಡುಪಿಯ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
ಹಲವು ಮನೆಗಳಿಗೆ ನೀರು ನುಗ್ಗಿವೆ.ಬೈಲಕೆರೆ ,ಕಲ್ಸಂಕ ,ಬನ್ನಂಜೆ ಮುಂತಾದೆಡೆಗಳಲ್ಲಿ ಜನರಿಗೆ ಮನೆಗಳಿಂಸ ಹೊರಬರಲೂ ಆಗುತ್ತಿಲ್ಲ. ಇಂದು ಬೆಳಿಗ್ಗಿನಿಂದಲೇ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಮನೆಗಳಲ್ಲಿ ಬಂಧಿಯಾಗಿದ್ದ ಹಲವರನ್ನು ದೋಣಿ ಮೂಲಕ ಅಗ್ನಿಶಾಮಕ ಸಿಬ್ಬಂದಿ ಸ್ಥಳಾಂತರ ಮಾಡಿದರು. ಮಳೆ ಸಂಬಂಧಿ ದುರ್ಘಟನೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ನಿನ್ನೆತನಕ ಇಬ್ಬರು ಸಾವನ್ನಪ್ಪಿದ್ದಾರೆ.