

ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ರೋಗಗಳ ಭಯ ನಮ್ಮನ್ನು ಕಾಡುತ್ತಲೇ ಇರುತ್ತದೆ. ಅದರಲ್ಲಿಯೂ ಮಧುಮೇಹ, ಯೂರಿಕ್ ಆಸಿಡ್, ಕೊಲೆಸ್ಟ್ರಾಲ್ ನಂಥಹ ಸಮಸ್ಯೆಗಳು ಅತಿಯಾಗಿ ಬಾಧಿಸುವ ಕಾಯಿಲೆಗಳಾಗಿವೆ.ಈ ರೋಗಗಳ ಅಪಾಯವು ನಿರಂತರವಾಗಿ ಹೆಚ್ಚುತ್ತಿದೆ.
ಅದು ನಮಗೆ ಆಗ ಮಾತ್ರ ತಿಳಿಯುತ್ತದೆ.ಬಿಡುವಿಲ್ಲದ ಜೀವನಶೈಲಿಯಿಂದಾಗಿ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಕೂಡಾ ಸಾಧ್ಯವಾಗುವುದಿಲ್ಲ. ಹೃದಯ ಸಂಬಂಧಿ ಕಾಯಿಲೆಗಳು ಕೂಡಾ ಬಾಧಿಸಲು ಆರಂಭವಾಗುತ್ತದೆ.ಕೆಟ್ಟ ಕೊಲೆಸ್ಟ್ರಾಲ್ ಒಮ್ಮೆ ಜಾಸ್ತಿಯಾಗಲು ಆರಂಭಿಸಿದರೆ ನಂತರ ಅದು ಶರ ವೇಗದಲ್ಲಿ ಹೆಚ್ಚುತ್ತಾ ಹೋಗುತ್ತದೆ.ಕೆಟ್ಟ ಕೊಲೆಸ್ಟ್ರಾಲ್‌ಗೆ ಹಲವಾರು ಔಷಧಿಗಳು ಲಭ್ಯವಿದೆ. ಆದರೆ ಮನೆ ಮದ್ದಿನ ಮೂಲಕವೂ ಅದನ್ನು ಸಂಪೂರ್ಣ ನಿಯಂತ್ರಣಕ್ಕೆ ತರುವುದು ಸಾಧ್ಯವಾಗುತ್ತದೆ.
ಯಾರ ರಕ್ತದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಲು ಆರಂಭವಾಗುತ್ತದೆಯೋ ಅವರು ತಮ್ಮ ಆಹಾರ ಪದ್ದತಿಯನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಆಹಾರದಲ್ಲಿ ಹೆಚ್ಚಿನ ಫೈಬರ್ ಅನ್ನು ಸೇವಿಸಬೇಕಾಗುತ್ತದೆ. ಹೀಗಾಗಿ ಕೊಲೆಸ್ಟ್ರಾಲ್ ಅನ್ನು ಕರಗಿಸಿ ನಾರ್ಮಲ್ ಮಾಡುವ ಸ್ಪೆಷಲ್ ಡ್ರಿಂಕ್ ನ ಬಗ್ಗೆ ನಾವಿಲ್ಲಿ ಮಾಹಿತಿ ನೀಡುತ್ತಿದ್ದೇವೆ.ಇದನ್ನು ತಯಾರಿಸುವುದು ಕೂಡಾ ಬಲು ಸುಲಭ.
ಮನೆಯಲ್ಲಿ ತಯಾರಿಸಬಹುದಾದ ಸ್ಪೆಷಲ್ ಡ್ರಿಂಕ್ :
ಇಸಾಬ್ಗೋಲ್ ಮತ್ತು ನೀರಿನಿಂದ ತಯಾರಿಸಿದ ಈ ವಿಶೇಷ ಪಾನೀಯವನ್ನು ನಿತ್ಯ ಕುಡಿಯುತ್ತಾ ಬಂದರೆ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ವೇಗವಾಗಿ ಕರಗುತ್ತದೆ.ಈ ಪಾನೀಯವನ್ನು ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಾತ್ರವಲ್ಲದೆ ಮಲಬದ್ಧತೆ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳನ್ನು ನಿಯಂತ್ರಿಸುವುದು ಕೂಡಾ ಸಾಧ್ಯವಾಗುತ್ತದೆ.
ತಯಾರಿಕೆಯ ವಿಶೇಷ ವಿಧಾನ :
ಇಸಾಬ್ಗೋಲ್ ಪಾನೀಯವನ್ನು ಇಸಾಬ್ಗೋಲ್ ಶರಬತ್ತು ಎಂದೂ ಕರೆಯುತ್ತಾರೆ. ಅದನ್ನು ತಯಾರಿಸುವ ವಿಧಾನ ಕೂಡಾ ತುಂಬಾ ಸುಲಭವಾಗಿದೆ.ಒಂದರಿಂದ ಎರಡು ಚಮಚ ಇಸಾಬ್ಗೋಲ್ ಅನ್ನು ಅರ್ಧ ಗ್ಲಾಸ್ ನೀರಿನಲ್ಲಿ ಸೇರಿಸಿ ಮತ್ತು ಕೆಲವು ಗಂಟೆಗಳ ಕಾಲ ಮುಚ್ಚಿಡಿ.ನಂತರ ಅದು ಜೆಲ್ಲಿಯಂತೆ ಕಾಣಿಸುತ್ತದೆ. ನಿಮ್ಮ ರುಚಿಗೆ ತಕ್ಕಂತೆ ಸಕ್ಕರೆ ಸೇರಿಸಿ ಮತ್ತೆ ಅರ್ಧ ಲೋಟ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಔಷಧ ಅವಲಂಬನೆಯನ್ನು ಕಡಿಮೆ ಮಾಡಿ :
ಈ ಸ್ಪೆಶಲ್ ಡ್ರಿಂಕ್ ಅನ್ನು ಸೇವಿಸುತ್ತಾ ಬಂದರೆ ಕೊಲೆಸ್ಟ್ರಾಲ್ ಗಾಗಿ ಔಷಧಿಗಳ ಮೇಲೆ ಅವಲಂಬನೆಯಾಗುವುದನ್ನು ತಡೆಯಬಹುದು.ಅಧಿಕ ಕೊಲೆಸ್ಟ್ರಾಲ್ ರೋಗಿಗಳಿಗೆ ಉತ್ತಮ ಆಹಾರವು ಮುಖ್ಯವಾಗಿದೆ.
ವೈದ್ಯರ ಸಲಹೆಯೂ ಅಗತ್ಯ :
ಅಧಿಕ ಕೊಲೆಸ್ಟ್ರಾಲ್ ನ ಸಮಸ್ಯೆಯು ಹೃದ್ರೋಗದಿಂದ ಪಾರ್ಶ್ವವಾಯುವಿನವರೆಗೆ ಅನೇಕ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಬಹುದು.ಇದರಿಂದಾಗಿ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ರೋಗಗಳಿಗೆ ಮನೆ ಮದ್ದು ಅನುಸರಿಸುತ್ತಿದ್ದರೂ ಕಾಲಕಾಲಕ್ಕೆ ವೈದ್ಯರನ್ನು ಸಂಪರ್ಕಿಸಬೇಕು.ಇದರಿಂದ ಯಾವುದೇ ಗಂಭೀರ ಸಮಸ್ಯೆ ಎದುರಾಗುವ ಅಪಾಯವನ್ನು ತಡೆಯಬಹುದು.