ಉಡುಪಿ: ಅಮೆಝಾನ್ ಕಂಪೆನಿಯ ಕಸ್ಟಮರ್‌ಕೇರ್ ಹೆಸರಿನಲ್ಲಿ ಆನ್‌ಲೈನ್ ಮೂಲಕ ಸಾವಿರಾರು ರೂ.ವಂಚಿಸಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಡುಬೆಳ್ಳೆಯ ರೋಶನ್ ಜಾಯ್(43) ಎಂಬವರು ಅಮೆಝಾನ್ ಕಂಪನಿಯಲ್ಲಿ ಆನ್‌ಲೈನ್ ಮೂಲಕ ಗ್ಲೀಸರ್ ಬುಕ್ ಮಾಡಿದ್ದು ಈ ವಸ್ತು ಬಾರದ ಕಾರಣ ಗೂಗಲ್‌ನಲ್ಲಿ ಅಮೆಝಾನ್ ಕಂಪನಿಯ ಕಸ್ಟಮರ್ ಕೇರ್ ನಂಬರ್ ಹುಡುಕಿ ನಂಬ್ರಕ್ಕೆ ಕರೆ ಮಾಡಿದ್ದರು.
ಈ ವೇಳೆ ವಾಟ್ಸಾಪ್‌ಗೆ ಬಂದ ಲಿಂಕ್‌ಗೆ ರೋಶನ್, ತನ್ನ ವೈಯಕ್ತಿಕ ಮಾಹಿತಿ, ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ನಮೂದಿಸಿದರು. ತದನಂತರದಲ್ಲಿ ರೋಶನ್ ಅವರ ಗಮನಕ್ಕೆ ಬಾರದೇ ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು 90,807ರೂ. ಕಡಿತ ಮಾಡುವ ಮೂಲಕ ವಂಚಿಸಿರುವುದಾಗಿ ದೂರಲಾಗಿದೆ.