March 6, 2026
WhatsApp Image 2026-03-06 at 8.27.30 AM

ಮಂಗಳೂರು: ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕ-ಯುವತಿಯರಿಗೆ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಹುಡುಕಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ಆರು ಮಂದಿಯನ್ನು ಬಂಧಿಸಿದ್ದಾರೆ.

ಮಾ.4ರಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಬದ್ರಿಯಾ ರಸ್ತೆಯ ಕ್ಲಾಸಿಕ್ ಕಂಫರ್ಟ್ ಲಾಡ್ಜ್ ನಲ್ಲಿ ರೂಮ್ ಪಡೆದು ಕುಳಿತು MDMA ಹಾಗೂ ಹೈಡ್ರೋ ವೀಡ್ ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರು ಮೊಹಮ್ಮದ್ ಸಯ್ಯದ್ ಆಫ್ರೀದಿ (26) ಕೊಟೇಶ್ವರ ಉಡುಪಿ ಮೂಲದವರು, ಪ್ರಸ್ತುತ ಪಾಂಡೇಶ್ವರ ಮಂಗಳೂರು; ಮಕ್ಸೂದ್ ಸಾಗ್ (23) ಬಲ್ಮಠ ಮಂಗಳೂರು; ಅಹಮ್ಮದ್ ಅಲಿ ಅರ್ಷಾನ್ (22) ಕೊಟೇಶ್ವರ ಉಡುಪಿ ಮೂಲದವರು, ಪ್ರಸ್ತುತ ಪಾಂಡೇಶ್ವರ ಮಂಗಳೂರು; ಫೆಲಿಕ್ಸ್ ಪಿ. ಜೊಸೆಫ್ (20) ಕೊಟ್ಟಾಯಂ, ಕೇರಳ ಇವರಿಂದ 53.87 ಗ್ರಾಂ MDMA, 103.20 ಗ್ರಾಂ ಹೈಡ್ರೋ ವೀಡ್ ಗಾಂಜಾ ಹಾಗೂ ಒಂದು MG Hector ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಬಂದರ್ ಬಳಿಯ ಗ್ರೀನ್ ಪಾರ್ಕ್ ಮೈದಾನದಲ್ಲಿ ಕಾರಿನಲ್ಲಿ ಕುಳಿತು ಗಾಂಜಾ ಹಾಗೂ ಹೈಡ್ರೋ ವೀಡ್ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ವೇಳೆ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರು ಎಡಲ್ ರೋಚ್ (33) ಕಂಕನಾಡಿ ಮಂಗಳೂರು ಹಾಗೂ ಆರೋನ್ ವಿಶಾಲ್ ಲಾಸ್ರಾದೋ (18) ಮಲ್ಲಿಕಟ್ಟೆ, ಕದ್ರಿ ಮಂಗಳೂರು., ಇವರಿಂದ 60 ಗ್ರಾಂ ಹೈಡ್ರೋ ವೀಡ್ ಗಾಂಜಾ, 1 ಕೆಜಿ 155 ಗ್ರಾಂ ಗಾಂಜಾ ಹಾಗೂ ಒಂದು Maruti Swift ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ತನಿಖೆಯಲ್ಲಿ ಮುಂಬೈ ನಿವಾಸಿಯಾದ ಸಂದೀಪ್ ಶೆಟ್ಟಿ ದುಬೈಯಲ್ಲಿ ಹೋಟೆಲ್ ಮ್ಯಾನೇಜರ್ ಆಗಿದ್ದು, ನಿಷೇಧಿತ ಮಾದಕ ವಸ್ತುಗಳನ್ನು ವಿಮಾನದ ಮೂಲಕ ಬೆಂಗಳೂರಿಗೆ ಸಾಗಾಟ ಮಾಡಿಸುತ್ತಿದ್ದನೆಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನ ವಿಮಾನ ನಿಲ್ದಾಣದಿಂದ ಮಾದಕ ವಸ್ತುಗಳನ್ನು ಸಾಗಾಟ ಮಾಡಲು ಎಡಲ್ ರೋಚ್ ಅವರನ್ನು ನೇಮಕ ಮಾಡಲಾಗಿದ್ದು, ಅವರು ಮಕ್ಸೂದ್ ಸಾಗ್ ಮೂಲಕ ಮೊಹಮ್ಮದ್ ಸಯ್ಯದ್ ಆಫ್ರೀದಿ ಹಾಗೂ ಅಹಮ್ಮದ್ ಅಲಿ ಅರ್ಷಾನ್ ಅವರಿಗೆ ಪೂರೈಸುತ್ತಿದ್ದರೆಂದು ತಿಳಿದುಬಂದಿದೆ.

ಈ ಸಂಬಂಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಅ.ಕ್ರ.29/2026 ರಂತೆ ಎನ್.ಡಿ.ಪಿ.ಎಸ್ ಕಾಯ್ದೆ 8(c), 20(B), (ii)(B) ಕಲಂಗಳಡಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ

About The Author

Leave a Reply

Your email address will not be published. Required fields are marked *

You cannot copy content of this page.