January 3, 2025
WhatsApp Image 2023-09-05 at 1.46.31 PM

ಬೆಂಗಳೂರು: ವರ್ಷದಲ್ಲಿ ಇನ್ಮುಂದೆ ಕಲಿಕಾ ಚೇತರಿಕೆಯ ಕಾರಣದಿಂದಾಗಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮೂರು ಬಾರಿ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂಬುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಣೆ ಮಾಡಿದರು.

ಇಂದು ವಿಧಾನಸೌಧದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ಶಾಲಾ ಶಿಕ್ಷಕರಿಗೆ ಇಪ್ಪತ್ತು, ಪ್ರೌಢ ಶಾಲಾ ಶಿಕ್ಷಕರಿಗೆ 20 ಪ್ರಶಸ್ತಿ, ವಿಶೇಷ ಶಿಕ್ಷಕರಿಗೆ ಇಬ್ಬರು ಸೇರಿದಂತೆ 31 ಉತ್ತಮ ಶಿಕ್ಷಕರಿಗೆ ರಾಜ್ಯ ಶಿಕ್ಷಕರ ಪ್ರಶಸ್ತಿಯನ್ನು ನೀಡಲಾಗಿದೆ ಎಂದರು.

ಶಾಲೆಗೆ ಹೋಗೋದಕ್ಕೆ ಮಕ್ಕಳಿಗೆ ಶಕ್ತಿ ಬೇಕು. ಮುಂಚೆ ಮೊಟ್ಟೆ ವಾರಕ್ಕೆ ಒಂದು ಕೊಡುತ್ತಿದ್ದೆವು. ಈಗ 1ನೇ ತರಗತಿಯಿಂದ 8ನೇ ತರಗತಿಯವರೆಗೆ ಒಂದು ಮೊಟ್ಟೆ ಕೊಡಲಾಗುತ್ತಿತ್ತು. 10ನೇ ತರಗತಿವರೆಗೆ ವಾರಕ್ಕೆ ಎರಡು ಮೊಟ್ಟೆಯನ್ನು ಕೊಡುವಂತ ನಿರ್ಧಾರವನ್ನು ಸಿಎಂ ಸಿದ್ಧರಾಮಯ್ಯ ಮಾಡಿದರು. 58 ಲಕ್ಷ ಮಕ್ಕಳಿಗೆ ಈಗ ರಾಜ್ಯ ಮಟ್ಟದಲ್ಲಿ ವಾರದಲ್ಲಿ ಎರಡು ದಿನ ಮೊಟ್ಟೆ ನೀಡಲಾಗುತ್ತಿದೆ ಎಂದರು.

ಶಿಕ್ಷಕರ ವರ್ಗಾವಣೆಯ ನಂತ್ರ ಕೆಲವೆಡೆ ಶಿಕ್ಷಕರ ಕೊರತೆ ಉಂಟಾಯಿತು. ಸಿಎಂ ಸಿದ್ಧರಾಮಯ್ಯ ಅವರು ಈ ವಿಚಾರ ಗಮನಿಸಿ, ಅತಿಥಿ ಶಿಕ್ಷಕರ ನೇಮಕಕ್ಕೆ ಅವಕಾಶ ನೀಡಿದರು. 43 ಸಾವಿರ ಮಂದಿ ಈಗ ಅತಿಥಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಶಿಕ್ಷಕರ ದಿನಾಚರಣೆ ಇರೋದರಿಂದ ನಿಮ್ಮ ಮಕ್ಕಳು ಎಷ್ಟು ಒತ್ತಡದಲ್ಲಿ ಓದುತ್ತಿರುತ್ತಾರೆ. ಹೇಗೆ ಒತ್ತಡದಲ್ಲಿ ಇರುತ್ತದೆ ಎಂಬುದು ನನಗೆ ಗೊತ್ತಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಪಿಯುಸಿ, ಎಸ್ ಎಸ್ ಎಲ್ ಸಿ ಯನ್ನು ವರ್ಷದಲ್ಲಿ ಮೂರು ಬಾರಿ ಬರೆಯೋದಕ್ಕೆ ಅವಕಾಶ ನೀಡಲಾಗುತ್ತೆದೆ ಎಂದರು.

ಹತ್ತನೆ ತರಗತಿಯಲ್ಲಿ ಮೂರು ಬಾರಿ ತೆಗೆದುಕೊಳ್ಳಬಹುದು. ಯಾವುದೇ ಕಾರಣಕ್ಕೂ ಮಕ್ಕಳಿಗೆ ಒಂದು ವರ್ಷ ವ್ಯರ್ಥ ಆಗಬಾರದು ಅಂತ ವರ್ಷದಲ್ಲಿ ಮೂರು ಬಾರಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವಂತ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಯಾವುದೋ ಒಂದು ಕಾರಣಕ್ಕೆ ವಿದ್ಯಾರ್ಥಿಗಳು ಫೇಲ್ ಆದರೇ ಇಡೀ ವರ್ಷ ಅವರ ಜೀವನ ವ್ಯರ್ತವಾಗಬಾರದು. ಪರೀಕ್ಷೆಗಳು ಮಕ್ಕಳನ್ನು ಫೇಲ್ ಮಾಡೋದಕ್ಕಲ್ಲ, ಜೀವನದ ಬಗ್ಗೆ ಕಲಿಕೆಗಾಗಿ ಇರಬೇಕು ಎಂದು ತಿಳಿಸಿದರು.

About The Author

Leave a Reply

Your email address will not be published. Required fields are marked *

You cannot copy content of this page.