ಸೌಜನ್ಯ ಕೊಲೆ ಪ್ರಕರಣ: ಧರ್ಮಸ್ಥಳ ಕ್ಷೇತ್ರದ ವಿರುದ್ಧ ಸುಳ್ಳು ಆರೋಪ ಖಂಡಿಸಿ ಪ್ರತಿಭಟನೆ ವೇಳೆ ಸೌಜನ್ಯ ಕುಟುಂಬಸ್ಥರ ಮೇಲೆ ಹಲ್ಲೆ ಯತ್ನ

ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅನೇಕ ರೀತಿಯ ಸುಳ್ಳು ಆರೋಪಗಳನ್ನು ಮಾಡಿ, ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ‘ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದ’ ಸಂಘಟನೆಯ ಮೂಲಕ ಮಂಜುನಾಥ ಸ್ವಾಮಿಯ ಭಕ್ತಾಭಿಮಾನಿಗಳಿಂದ ಉಜಿರೆಯಲ್ಲಿ ಆಯೋಜಿಸಲಾಗಿರುವ ಬೃಹತ್ ಸಮಾವೇಶ ಮತ್ತು ಹಕ್ಕೊತ್ತಾಯ ಸಭೆ ನಡೆಯಿತು.ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದಿಂದ ಪೇಟೆ ಮೂಲಕ ಸಾಗಿಬಂದ ಬೃಹತ್ ಮೆರವಣಿಗೆ ಎಸ್.ಡಿ.ಎಂ ಕಾಲೇಜು ಎದುರಿಗೆ ಸಾಗಿ ಬಂತು. ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ಸಾವಿರಾರು ಜನರು ಶಿಸ್ತುಬದ್ಧವಾಗಿ ಮೆರವಣಿಗೆ ಮೂಲಕ ಸಾಗಿಬಂದರು. ಎಲ್ಲರ ಕೈಯಲ್ಲೂ ಕ್ಷೇತ್ರದ ಪರವಾಗಿ ಮತ್ತು ಡಾ. ಹೆಗ್ಗಡೆ ಪರವಾದ ಬರಹಗಳಿದ್ದ ಫಲಕಗಳಿದ್ದವು.ಸುಮಾರು ಒಂದು ಕಿಲೋಮೀಟರ್ ದೂರ ಸಾಗಲಿರುವ ಈ ಜಾಥಾ ಉಜಿರೆ ಎಸ್.ಡಿ.ಎಂ ಕಾಲೇಜು ಎದುರು ಬಂದು ಸೇರಲಿದ್ದು, ಬಳಿಕ ಇಲ್ಲಿ ಬೃಹತ್ ಸಮಾವೇಶ ನಡೆಯಿತು.

ಸಭೆ ಬಳಿಕ ನಡೆದ ಪಾದಯಾತ್ರೆ ವೇಳೆ ಸ್ಥಳಕ್ಕೆ ಆಗಮಿಸಿದ ಸೌಜನ್ಯ ಕುಟುಂಬಸ್ಥರ ಮೇಲೆ ಭಕ್ತವೃಂದದ ಕೆಲವರು ಆಕ್ರೋಶಿತರಾಗಿ‌ ಹಲ್ಲೆಗೆ ಯತ್ನಿಸಿದ್ದಾರೆ. ಸೌಜನ್ಯ ತಾಯಿ ಕುಸುಮಾವತಿ ಮಗಳಿಗೆ ನ್ಯಾಯ ಕೊಡಿ ಎಂದು‌ ಸ್ಥಳಕ್ಕೆ‌ ತೆರಳಿದ್ದು ಈ ವೇಳೆ ಅವರ ಮೇಲೆ ಪ್ರತಿಭಟನಾಕಾರರು ಆಕ್ರೋಶಿತರಾದರು. ಸೌಜನ್ಯ ಸಹೋದರ ಜಯರಾಮ ಗೌಡರನ್ನೂ ಎಳೆದಾಡಿದ್ದು, ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ.

Check Also

ಕಾರವಾರ: ಮಳೆಗೆ ಗುಡ್ಡ ಕುಸಿದು ʻಕಾರವಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ‌ʼ ಬಂದ್ : ವಾಹನ ಸವಾರರ ಪರದಾಟ

ಕಾರವಾರ : ರಾಜ್ಯಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು, ಭಾರೀ ಮಳೆಯಿಂದಾಗಿ ಗುಡ್ಡ ಕುಸಿದ ಪರಿಣಾಮ ಕಾರವಾರ-ಬೆಂಗಳುರು ರಾಷ್ಟ್ರೀಯ ಹೆದ್ದಾರಿ ಸಂಚಾರ …

Leave a Reply

Your email address will not be published. Required fields are marked *

You cannot copy content of this page.