ಮೆದುಳು ತಿನ್ನೋ ಅಮೀಬಾ ಸೋಂಕಿಗೆ 14 ವರ್ಷದ ಬಾಲಕ ಮೃತ್ಯು; 3ನೇ ಪ್ರಕರಣ

ಕೋಝೀಕೋಡ್(ಕೇರಳ): ಕೇರಳದ ಖಾಸಗಿ ಆಸ್ಪತ್ರೆಯೊಂದರಲ್ಲಿ 14 ವರ್ಷದ ಬಾಲಕನೊಬ್ಬ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್‌(ಮಿದುಳು ತಿನ್ನುವ ಅಮೀಬಾ) ಎಂಬ ಅಪರೂಪದ ಮಿದುಳು ಸೋಂಕಿನಿಂದ ಕೊನೆಯುಸಿರೆಳೆದಿರುವುದಾಗಿ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಮೂಲಗಳು ಬಹಿರಂಗಪಡಿಸಿವೆ. ಅಪರೂಪದ ಮೆದುಳು ತಿನ್ನುವ ಅಮೀಬಾದಿಂದಾಗಿ ಸಾವನ್ನಪ್ಪಿರುವ ಮೂರನೇ ಘಟನೆ ಇದಾಗಿದೆ.

ಮೇ 21ರಂದು ಮಲಪ್ಪುರಂನ ಐದು ವರ್ಷದ ಪುಟ್ಟ ಬಾಲಕಿ ಈ ಸೋಂಕಿನಿಂದ ಮೃತಪಟ್ಟಿದ್ದು, ಜೂನ್‌ 25ರಂದು ಕಣ್ಣೂರ್‌ ನ 13 ವರ್ಷದ ಬಾಲಕಿಯೊಬ್ಬಳು ಕೊನೆಯುಸಿರೆಳೆದಿದ್ದಳು. ಇದೀಗ ಮೂರನೇ ಘಟನೆ ನಡೆದಿದೆ.

ಅಮೀಬಿಕ್‌ ಮೆನಿಂಗೊಎನ್ಸೆಫಾಲಿಟಿಸ್‌ ನೆಗ್ಲೇರಿಯಾ ಫೌಲೆರಿಯಿಂದ ಜನ್ಮತಳೆಯುತ್ತವೆ. ಇದು ಸರೋವರ, ನದಿಗಳಂತಹ ಬೆಚ್ಚಗಿನ ಸಿಹಿನೀರಿನ ಮೂಲಗಳಲ್ಲಿ ಕಂಡು ಬರುವ ಸೂಕ್ಷ್ಮ ಜೀವಿಯಾಗಿದೆ.

ಈ ಸೂಕ್ಷ್ಮ ಅಮೀಬಾ ನೀರಿನಲ್ಲಿ ನಾವು ಈಜಾಡಿದಾಗ, ಅಥವಾ ಆಟವಾಡುವ ಸಂದರ್ಭದಲ್ಲಿ ಮೂಗಿನ ಒಳಗಿನಿಂದ ದೇಹವನ್ನು ಪ್ರವೇಶಿಸುತ್ತದೆ. ಈ ಮೂಲಕ ಮೆದುಳಿಗೆ ಹೋಗಿ ಅಲ್ಲಿ ಮೆದುಳನ್ನು ತಿನ್ನಲು ಪ್ರಾರಂಭಿಸುತ್ತದೆ. ಇದು ಮಾರಣಾಂತಿಕವಾಗಿ ಸಾವು ಸಂಭವಿಸುತ್ತದೆ ಎಂದು ವರದಿ ವಿವರಿಸಿದೆ.

Check Also

ಜುಲೈ.23ರಂದು 2024-25ನೇ ಸಾಲಿನ ‘ಕೇಂದ್ರ ಬಜೆಟ್’ ಮಂಡನೆ

ನವದೆಹಲಿ: 2024-25ನೇ ಸಾಲಿನ ಕೇಂದ್ರ ಬಜೆಟ್ ( Union Budget ) ಜುಲೈ 23 ರಂದು ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಸಂಸತ್ತಿನ …

Leave a Reply

Your email address will not be published. Required fields are marked *

You cannot copy content of this page.