

ತಿರುಪತಿ ಶ್ರೀ ವೆಂಕಟೇಶನ ಸನ್ನಿಧಾನದಲ್ಲಿ ಶೀರೂರು ಶ್ರೀಶ್ರೀ ವೇದವರ್ಧನ ತೀರ್ಥ ಶ್ರೀಪಾದರು.
ತಿರುಪತಿ ತಿರುಮಲ ಶ್ರೀ ವೆಂಕಟೇಶ ದೇವಸ್ಥಾನಕ್ಕೆ ಶೀರೂರು ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ತಮ್ಮ ಶಿಷ್ಯವೃಂದವರೊಂದಿಗೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು. ಟಿಟಿಡಿ ವತಿಯಿಂದ ಶ್ರೀಗಳನ್ನು ಬರಮಾಡಿಕೊಂಡ ಆಡಳಿತ ಮಂಡಳಿ, ಶಿಷ್ಟಾಚಾರ ಪ್ರಕಾರ ಅವರಿಗೆ ಅದ್ದೂರಿ ಸ್ವಾಗತ ನೀಡಿದರು.
ಈ ಸಂದರ್ಭದಲ್ಲಿ ಶೀರೂರು ಮಠದ ದಿವಾನ ಸರಳತ್ತಾಯ, ಬಾಲಾಜಿ ರಾಘವೇಂದ್ರ ಆಚಾರ್ಯ, ಶ್ರೀನಿವಾಸ ಯುನಿವರ್ಸಿಟಿಯ ಚಾನ್ಸಲರ್ ರಾಘವೇಂದ್ರ ರಾವ್, ರಮೇಶ ಪೆಜತ್ತಾಯ ಮತ್ತಿತರರು ಉಪಸ್ಥಿತರಿದ್ದರು.